ಟಿಎಪಿಸಿಎಂಎಸ್ ಚುನಾವಣೆ ಭರ್ಜರಿ ಪ್ರಚಾರ

ನಂಜನಗೂಡು . ನ.02- ನಂಜನಗೂಡು 7 ರಂದು ನಡೆಯುವ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎಚ್ ಸಿ ಮಹದೇವಪ್ಪ ಯತೀಂದ್ರ ಸಿದ್ದರಾಮಯ್ಯ ಬಣದವರು ನಗರ ಮತ್ತು ತಾಲೂಕಿನಾದ್ಯಂತ ಭರ್ಜರಿ ಮತಯಾಚನೆ ಪ್ರಚಾರ ಕೈಗೊಂಡಿದ್ದಾರೆ.
ಅಭ್ಯರ್ಥಿಗಳು ಮನೆಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ ಈ ಬಾರಿ ನಮ್ಮನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕೇಳುತ್ತಿದ್ದಾರೆ ಹೋದ ಕಡೆಗಳಲ್ಲಿ ಉತ್ತಮ ರೀತಿಯಲ್ಲಿ ಮತದಾರರು ಸ್ಪಂದಿಸುತ್ತಿದ್ದಾರೆ ಇದರಿಂದ ಗೆಲ್ಲುವ ಸೂಚನೆ ಕಂಡು ಬಂದು ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.
ಮತ ಯಾಚನೆಯ ಸಂದರ್ಭದಲ್ಲಿ ಅಭ್ಯರ್ಥಿಗಳಾದ 16 ನಂಜಪ್ಪ ಹೆ ಹಳ್ಳಿ ಶಿವಪ್ರಕಾಶ್ ಕೆಬಿ ಚೋಳ ರಾಜು ವಿಮಲಮ್ಮ ಹುಲ್ಲಹಳ್ಳಿ ಶಿವಬಸಪ್ಪ ಸೋಮಶೇಖರ್ ಹೆಗ್ಗಡಹಳ್ಳಿ ರತ್ನಮ್ಮ ಚುಂಚನಹಳ್ಳಿ ಮತ್ತು ತಮ್ಮಣ್ಣ ಶಂಕರಪುರ ಮರಿಸ್ವಾಮಿ ಚಿನ್ನಸ್ವಾಮಿ ಸೇರಿದಂತೆ ಮುಖಂಡರಾದ ವೀರಶೈವ ಮುಖಂಡ ಬುಲೆಟ್ ಮಾದೇವಪ್ಪ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸ್ವಾಮಿ ಕೆಪಿ ಸಿದ್ದಲಿಂಗಪ್ಪ ದೇಬೂರು ಕೆಂಪಣ್ಣ ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಾರುತಿ ಇಂದನ್ ಬಾಬು ಹಳ್ಳದಕೆರಿ ಗೋವಿಂದ ಶ್ರೀನಿವಾಸ್ ಮಹಾದೇವಸ್ವಾಮಿ ಫೈರೋಜ್ ಪಾತ್ರೆ ಅಂಗಡಿ ಮಂಜುನಾಥ್.