ಟಿಎಪಿಸಿಎಂಎಸ್ ಚುನಾವಣೆ:ಬಿಜೆಪಿ ಬೆಂಬಲಿತ 10 ಅಭ್ಯರ್ಥಿಗಳು ಜಯಬೇರಿ .

ಹಗರಿಬೊಮ್ಮನಹಳ್ಳಿ:ನ.06 ತಾಲೂಕಿನ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಇರುವ ಹತ್ತು ಸ್ಥಾನಗಳಲ್ಲೂ ಬಿಜೆಪಿ ಬೆಂಬಲಿತರು ಜಯಬೇರಿ ಬಾರಿಸುವ ಮೂಲಕ ವಿಜಯೋತ್ಸವ ಆಚರಿಸಿದರು.
ತಾಲೂಕಿನ ಒಟ್ಟು ಮತಗಳು 321 ಹೊಂದಿದ್ದು ಮೀಸಲಾತಿ 6 ಕೇತ್ರಗಳಿಗೆ 13 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದು.ಅದರಲ್ಲಿ ಬಿಜೆಪಿ ಬೆಂಬಲಿತ 6ಜನ ಅಭ್ಯರ್ಥಿಗಳಾದ ಬಣಕಾರ ಗೋಣೆಪ್ಪ,ಮೃತ್ಯುಂಜಯ ಬಾದಾಮಿ,ರೂಪ ಎನ್.ಬಿ.ಕರಿ ಹನುಮಂತಪ್ಪ,ಬೆಳ್ಳಕ್ಕಿ ಪ್ರಭಾವತಿ,ಮಂಜುನಾಥ ಗೌಡ ಹೆಚ್ಚು ಮತಗಳನ್ನು ಪಡೆಯುವ ಮೂಲಕ ವಿಜಯಶಾಲಿಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಡಾ.ಸತೀಶ್ ಪಾಟೇಲ್ ತಿಳಿಸಿದರು.
ಉಳಿದ 4 ಸ್ಥಾನಗಳಿಗೆ 8 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇದಕ್ಕೆ 16 ಮತಗಳನ್ನು ಹೊಂದಿದ್ದ ಪ್ರತಿನಿಧಿಗಳು(ಡೆಲಿಗೇಡ್) ಚಲಾಯಿಸಿದ ಮತಗಳಲ್ಲಿ ಭರಮರಡ್ಡಿ 9 ಮತಗಳು ಪಡೆದರೆ, ಮೈನಹಳ್ಳಿ, ಬಸವರೆಡ್ಡಿ, ಎನ್.ಹಾಲೇಶ್ ಮೂರು ಜನ 8 ಮತ ಗಳನ್ನು ಪಡೆಯುವ ಮೂಲಕ ಬಿಜೆಪಿ ಬೆಂಬಲಿತರು ಗೆಲವಿನ ನಗೆ ಬೀರಿದರು.
ಬಿಜೆಪಿ ಮುಖಂಡರಾದ ಸಂದೀಪ್ ಸಿಂಗ್ ,ತಾಲೂಕು ಅಧ್ಯಕ್ಷ ವಿರೇಶ್ವರ ಸ್ವಾಮಿ, ಕಾರ್ಯದರ್ಶಿ ಬ್ಯಾಟಿ ನಾಗರಾಜ್, ಜಿಪಂ ಸದಸ್ಯ ಶ್ಯಾನಬೋಗರ ಗುರುಸಿದ್ದಪ್ಪ,ಮಾಜಿ ಅಧ್ಯಕ್ಷ ನರೆಗಲ್ ಕೊಟ್ರೇಶ್, ನಗರ ಘಟಕದ ಅಧ್ಯಕ್ಷ ಜಿ.ಎಂ.ಜಗದೀಶ್, ಭದ್ರವಾಡಿ ಚಂದ್ರುಶೇಖರ್, ರಾಜುಪಾಟೇಲ್, ಬಾಗಳಿ ವೆಂಕಟೇಶ್, ಚಿತ್ತಾವಾಡಿಗಿ ಪ್ರಕಾಶ್, ಗಿರಿರಾಜ್ ರೆಡಿ, ಕಿನ್ನಾಳ ಸುಭಾಷ್ ಇತರರಿದ್ದರು.