ಟಿಎಪಿಸಿಎಂಎಸ್ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಆಯ್ಕೆ

ಮಧುಗಿರಿ, ನ. ೫- ಇಲ್ಲಿನ ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಹಕಾರ ಸಂಘ ನಿಯಮಿತ (ಟಿಎಪಿಸಿಎಂಎಸ್)ದ ೫ ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿಯ ೧೨ ನಿರ್ದೇಶಕರುಗಳ ಚುನಾವಣೆಯಲ್ಲಿ ಅಪೆಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಬೆಂಬಲಿತ ೧೧ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಮಾನ್ಯ , ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಎ ಮತ್ತು ಬಿ ಹಾಗೂ ಮಹಿಳೆಯರಿಗೆ ಮೀಸಲಿರಿಸಿದ ಸ್ಥಾನಗಳಿಗೆ ಸ್ಪರ್ಧಿಸಿ ಈ ಕೆಳಕಂಡ ಅಭ್ಯರ್ಥಿಗಳು ಅವಿರೋಧವಾಗಿ ಸಹಕಾರ ಸಂಘಗಳ ನಿಯಮ ೧೯೬೦, ನಿಯಮ೧೪ ಜಿ ನಲ್ಲಿನ ಉಪಬಂಧಾನುಸಾರ ಚುನಾವಣಾಧಿಕಾರಿಗಳು ಘೋಷಣೆ ಮಾಡಿರುತ್ತಾರೆ. ಸಾಮಾನ್ಯ ಎ ತರಗತಿ ಸ್ಥಾನ ಮಾತ್ರ ಖಾಲಿ ಉಳಿದಿದೆ.
ಎಂ. ಎಸ್. ಮಲ್ಲಿಕಾರ್ಜುನಯ್ಯ ( ಮಿಡಿಗೇಶಿ), ಹೆಚ್. ಶನಿವಾರಂರೆಡ್ಡಿ( ಐ.ಡಿ.ಹಳ್ಳಿ), ಶ್ರೇಯಾಂಸ್ ಕುಮಾರ್ (ಶ್ರಾವಂಡನಹಳ್ಳಿ), ಮಲ್ಲಿಕಾರ್ಜುನಯ್ಯ (ಬಡವನಹಳ್ಳಿ), ಎನ್. ಸಂಜೀವಗೌಡ (ದೊಡ್ಡಮಾಲುರು), ಕರಿಯಪ್ಪ( ಕೊಡಗದಾಲ), ಪಿ. ಟಿ .ಗೋವಿಂದಯ್ಯ (ತಾಡಿ), ಎಂ. ರಮಾಬಾಯಿ ( ಗೊಂದಿಹಳ್ಳಿ) , ಗೌರಮ್ಮ( ವೀರಾಪುರ), ವೆಂಕಟಪ್ಪ( ದೊಡ್ಡಮಾಲುರು), ಗೋವಿಂದಪ್ಪ(ಗಡ್ಡೆತಿಮ್ಮನಹಳ್ಳಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರುಗಳು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ .ಎನ್. ರಾಜಣ್ಣ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ. ನಾಗೇಶ್‌ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ರಾಜಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.
ಅಭಿನಂದನೆಗಳು
ಅವಿರೋಧವಾಗಿ ಆಯ್ಕೆಯಾದ ಎಲ್ಲ ನಿರ್ದೇಶಕರುಗಳನ್ನು ಕ್ರಿಬ್ಕೋ ಸಂಸ್ಥೆಯ ನಿರ್ದೇಶಕ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ, ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್. ರಾಜೇಂದ್ರ ಅಭಿನಂದಿಸಿದ್ದಾರೆ.