ಕಲಬುರಗಿ,ಜೂ 2: ವಿಭಾಗದ ಟಿಎನ್‍ಎಐ ( ಟ್ರೇನ್ಡ್ ನರ್ಸಸ್ ಅಸೋಸಿಯೇಶನ್ ಆಫ್ ಇಂಡಿಯಾ) ವತಿಯಿಂದ ಮೇ.29 ಹಾಗೂ 30ರಂದು ಎರಡು ದಿವಸಗಳ 7 ಜಿಲ್ಲೆಗಳ ನಸಿರ್ಂಗ್ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳು ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. 7 ಜಿಲ್ಲೆಗಳ ವಿವಿಧ ನಸಿರ್ಂಗ್ ಶಾಲೆಗಳ ಹಾಗೂ ವಿವಿಧ ನರ್ಸಿಂಗ್ ಕಾಲೇಜ್ ಗಳಿಂದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣ ದಲ್ಲಿ 100 ಮೀ, 400ಮೀ ರಿಲೆ, ಜಾವಲಿನ್ ಥ್ರೋ, ಡಿಸ್ಕಸ್ ಥ್ರೋ, ಬ್ಯಾಟಮಿಂಟನ್ ಆಟಗಳು ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ರಂಗೋಲಿ, ಸೋಲೋ ಡ್ಯಾನ್ಸ್, ಕ್ವಿಜ್, ನಿಬಂಧ ಮುಂತಾದ ಸ್ಪರ್ಧೆಗಳು ನಗರದ ಇಎಸ್ ಐಸಿ ಮೆಡಿಕಲ್ ಕಾಲೇಜ್ ನಲ್ಲಿ ಜರುಗಿದವು.
ವಿಭಾಗೀಯ ಟಿಎನ್‍ಎ ಐ ಅಧ್ಯಕ್ಷ ಶ್ರೀಕಾಂತ್ ಫೂಲಾರಿ, ಸರಕಾರಿ ನಸಿರ್ಂಗ್ ಅಧಿಕಾರಿಗಳ ಸಂಘದ ಅಧಿಕಾರಿಗಳ ಸಂಘದ ಅಧ್ಯಕ್ಷ ಮಡಿವಾಳಪ್ಪ ನಾಗರಹಳ್ಳಿ, ಇಎಸ್‍ಐಸಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಪೆÇ್ರಫೆಸರ್ ಸ್ನೇಹಲತಾ, ವಸಂತ ನರ್ಸಿಂಗ್ ಕಾಲೇಜ್ ನ ಆದಿ ಪ್ರಿಯಾ, ಅಲ್ ಕರೀಂ ನರ್ಸಿಂಗ್ ಕಾಲೇಜು, ಡಿವೈನ್ ನರ್ಸಿಂಗ್ ಕಾಲೇಜ್, ಅಲ್ ಖಮರ್ ನರ್ಸಿಂಗ್ ಕಾಲೇಜು ಬಳ್ಳಾರಿಯ ಸರಕಾರಿ ನರ್ಸಿಂಗ್ ಕಾಲೇಜ್, ಹೊಸಪೇಟೆಯ ಸಪ್ತಗಿರಿ ನರ್ಸಿಂಗ್ ಕಾಲೇಜು ಬೀದರ್ ನ ವಿವಿಧ ನರ್ಸಿಂಗ್ ಕಾಲೇಜ್, ಹಾಗೂ ಕಲಬುರಗಿ ವಿವಿದ ನರ್ಸಿಂಗ್ ಕಾಲೇಜ್ ನ ಮುಖ್ಯಸ್ಥರು ಹಾಗೂ ಪ್ರಾಂಶುಪಾಲರು ವಿಧ್ಯಾರ್ಥಿಗಳು ಹಾಜರಿದ್ದರು.