ಟಿಎಂಸಿ-ಬಿಜೆಪಿ ಕಾರ್‍ಯಕರ್ತರ ನಡುವೆ ಘರ್ಷಣೆ

೩ನೇ ಹಂತ ಮತದಾನ

ನವದೆಹಲಿ,ಮೇ.೭- ಲೋಕಸಭೆಯ ಮೂರನೇ ಹಂತದ ಚುನಾವಣೆಯಲ್ಲಿ ೧೨ ರಾಜ್ಯಗಳ ೯೩ ಲೋಕಸಭಾ ಕ್ಷೇತ್ರಗಳಲ್ಲಿ ಬಾರಿ ಬಿಗಿ ಭದ್ರತೆಯಲ್ಲಿ ಮತದಾನ ನಡೆದಿದ್ದು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.
ಪಶ್ಚಿಮ ಬಂಗಾಳದ ಜಂಗೀಪುರದಲ್ಲಿ ಬಿಜೆಪಿ ಅಭ್ಯರ್ಥಿ ಧನಂಜಯ್ ಘೋಷ್ ಮತ್ತು ಸ್ಥಳೀಯ ಟಿಎಂಸಿ ಕಾರ್ಯಕರ್ತರ ನಡುವೆ ಮತಗಟ್ಟೆಯಲ್ಲಿ ತೀವ್ರ ವಾಗ್ವಾದದ ನಂತರ ಘರ್ಷಣೆಗಳು ವರದಿಯಾಗಿವೆ. ಬಿಜೆಪಿ ಅಭ್ಯರ್ಥಿ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾರೆ ಎಂದು ಟಿಎಂಸಿ ಆರೋಪಿಸಿದ್ದು ಇದರಿಂದ ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್, ಮದ್ಯಪ್ರದೇಶ,ಉತ್ತರ ಪ್ರದೇಶ,ಬಿಹಾರ, ಛತ್ತೀಸ್ ಗಡ, ಹಿಂದಿಭಾಷೆಯ ಹೃದಯ ರಾಜ್ಯಗಳು ,ಕರ್ನಾಟಕ ಸೇರಿದಂತೆ ೧೨ ರಾಜ್ಯಗಳ ೯೩ ಲೋಕಸಭಾ ಕ್ಷೇತ್ರಗಳಿಗೆ ಬೆಳಗ್ಗೆ ಯಿಂದಲೇ ಬಿರುಸಿನ ಮತದಾನ ಬಿಗಿ ಭದ್ರತೆಯಲ್ಲಿ ಆರಂಭವಾಗಿದ್ದು ಮದ್ಯಾಹ್ನದ ವೇಳೆಗೆ ಶೇ.೪೫ ರಿಂದ ಶೇ.೫೦ ರಷ್ಟು ಮತದಾನವಾಗಿದೆ.
ಉಳಿದಂತೆ ಅಸ್ಸಾಂ, ಬಂಗಾಳ, ಗೋವಾ,ಮತ್ತು ಮಹಾರಾಷ್ಟ್ರ, ಮತ್ತು ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಮತ್ತು ಜಮ್ಮು ಮತ್ತು ಕಾಶ್ಮೀರದಕಾಶ್ಮೀರದ ಲೋಕಸಭಾ ಸ್ಥಾನಗಳಲ್ಲಿ ಮತಯಂತ್ರದ ದೋಷ, ಸಣ್ಣ ಪುಟ್ಟ ಅಹಿತಕರ ಘಟನೆ ಹೊರತು ಪಡಿಸಿ ಮತದಾನ ನಡೆದಿದೆ.
ಈ ಹಂತಗಳಲ್ಲಿ ನಡೆಯುತ್ತಿರುವ ೯೩ ಲೋಕಸಭಾ ಕ್ಷೇತ್ರಗಳಲ್ಲಿ ೨೦೧೯ ರಲ್ಲಿ ಬಿಜೆಪಿ ೮೦ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ೨೦೨೪ ರಲ್ಲಿಯೂ ಕೂಡ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದ್ದು ಈ ಬಾರಿ ಇಂಡಿಯಾ ಮೈತ್ರಿಕೂಟ ಪ್ರಬಲ ಪ್ರತಿಸ್ಪರ್ಧಿ ನೀಡಿದೆ.
ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷ ಇಂಡಿಯಾ ಈ ಹಂತದ ಮತದಾನದಲ್ಲಿ ೧೧ ಸ್ಥಾನಗಳನ್ನು ಮಾತ್ರ ಗೆದ್ದಿತ್ತು, ಉಳಿದ ಎರಡು ಅಸ್ಸಾಂ ಮತ್ತು ದಾದ್ರಾ ಮತ್ತು ನಗರ ಹವೇಲಿ – ಸ್ವತಂತ್ರ ಸಂಸದರು ಆಯ್ಕೆಯಾಗಿದ್ದರು. ಈ ಬಾರಿ ಹೆಚ್ಚಿನ ಸ್ಥಾನದಲ್ಲಿ ಗೆಲ್ಲುವ ವಿಶ್ವಾಸದಲ್ಲಿವೆ.
ಈ ಹಂತದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇಂದ್ರ ಸಂಪುಟ ಸಹೋದ್ಯೋಗಿಗಳಾದ ಜ್ಯೋತಿರಾಧಿತ್ಯ ಸಿಂಧಿಯಾ ಮತ್ತು ಪ್ರಲ್ಹಾದ್ ಜೋಶಿ , ಪುರುಷೋತ್ತಮ್ ರೂಪಾಲಾ ಸೇರಿದಂತೆ ಹಲವು ಘಟಾನುಘಟಿ ನಾಯಕರು ಕಣದಲ್ಲಿದ್ದಾರೆ.
ಗುಜರಾತ್‌ನ ಗಾಂಧಿನಗರ ಕ್ಷೇತ್ರದಲ್ಲಿ ಅಮಿತ್ ಷಾ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.ಈ ಸ್ಥಾನ ಮಾಜಿ ಉಪಪ್ರಧಾನಿ ಎಲ್‌ಕೆ ಅಡ್ವಾಣಿಯವರ ಭದ್ರಕೋಟೆಯಾಗಿತ್ತು, ೧೯೯೮ ರಿಂದ ೨೦೧೯ ರವರೆಗೆ ಗೆಲುವು ಸಾಧಿಸಿದ್ದರು. ೧೯೮೪ ರಲ್ಲಿ ಜಿಐ ಪಟೇಲ್ ಅವರ ವಿಜಯದ ನಂತರ ಕಾಂಗ್ರೆಸ್ ಗುಜರಾತ್ ರಾಜಧಾನಿ ಗಾಂಧಿನಗರದ ಕ್ಷೇತ್ರದಲ್ಲಿ ಗೆಲುವು ಸಾಧಿಸಿಲ್ಲ.
ಜ್ಯೋತಿರಾಧಿತ್ಯ ಸಿಂಧಿಯಾ ಅವರು ಮಧ್ಯಪ್ರದೇಶದಲ್ಲಿ ತಮ್ಮ ಕುಟುಂಬದ ಭದ್ರಕೋಟೆ ಗುಣ ಕ್ಷೇತ್ರವನ್ನು ಮರಳಿ ಗೆಲ್ಲಲು ಪ್ರಯತ್ನ ನಡೆಸಿದ್ದಾರೆ. ಕಾಂಗ್ರೆಸ್‌ನ ಸದಸ್ಯರಾಗಿ ೧೨ ವರ್ಷಗಳ ಕಾಲ ಸ್ಥಾನವನ್ನು ಹೊಂದಿದ್ದರು ಆದರೆ ಅವರು ಕೇಸರಿ ಪಕ್ಷಕ್ಕೆ ಹಾರುವ ಒಂದು ವರ್ಷದ ಮೊದಲು ೨೦೧೯ ರ ಚುನಾವಣೆಯಲ್ಲಿ ಬಿಜೆಪಿಯ ಕೃಷ್ಣ ಪಾಲ್ ಯಾದವ್ ಎದುರು ಪರಾಭವಗೊಂಡಿದ್ದರು.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿದಿಶಾ ಕ್ಷೇತ್ರದಿಂದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ರಾಜ್‌ಗಢ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ – ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಬಾರಾಮತಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ.
ಉಪಮುಖ್ಯಮಂತ್ರಿ ಪತ್ನಿ ಸುನೇತ್ರಾ ಪವಾರ್ ವಿರುದ್ಧ ಸುಳ್ಯ ಸ್ಪರ್ಧೆ ಎಂಬ ದೊಡ್ಡ ಶೀರ್ಷಿಕೆ ಇಲ್ಲಿದೆ
ಶರದ್ ಪವಾರ್ ಅವರ ಎನ್‌ಸಿಪಿ ಬಣ ಭಾಗವಾಗಿರುವ ವಿರೋಧ ಪಕ್ಷದ ಮಹಾ ವಿಕಾಸ್ ಅಘಾಡಿ ಮೈತ್ರಿ ರಾಜ್ಯದ ೪೮ ಲೋಕಸಭಾ ಸ್ಥಾನಗಳಲ್ಲಿ ೪೫ ಸ್ಥಾನಗಳನ್ನು ಗೆಲ್ಲುವ ’ಮಿಷನ್ ೪೫’ ಗುರಿ ಹಾಕಿಕೊಂಡಿದೆ.
ಉತ್ತರ ಪ್ರದೇಶದ ೧೦ ಸ್ಥಾನಗಳಲ್ಲಿ ಮೈನ್‌ಪುರಿ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಕುಟುಂಬದ ಭದ್ರಕೋಟೆಯಾಗಿದೆ. ಪತ್ನಿ ಡಿಂಪಲ್ ಯಾದವ್ ಕಣಕ್ಕಿಳಿದಿದ್ದಾರೆ.
ಸಾರ್ವತ್ರಿಕ ಚುನಾವಣೆಗೆ ಇನ್ನೂ ನಾಲ್ಕು ಹಂತಗಳಿದ್ದು, ಮೇ ೧೩ ರಂದು ನಾಲ್ಕನೇ ಹಂತ, ಮೇ ೨೦ ರಂದು ಐದನೇ, ಮೇ ೨೫ ರಂದು ಆರನೇ ಮತ್ತು ಜೂನ್ ೧ ರಂದು ಏಳನೇ ಹಂತ. ಫಲಿತಾಂಶ ಜೂನ್ ೪ ರಂದು ಪ್ರಕಟವಾಗಲಿದೆ.