ಟಿಎಂಎ ಪೈ ಅವರ ಜನ್ಮದಿನಾಚರಣೆ

ಮೂಡುಬಿದಿರೆ, ಮೇ ೩- ಟಿಎಂಎ ಪೈ ಅವರ ೧೨೩ನೇ ಜನ್ಮದಿನಾಚರಣೆಯ ಅಂಗವಾಗಿ ಇಲ್ಲಿನ ಮಹಾವೀರ ಕಾಲೇಜಿನ ಅಂಗಸಂಸ್ಥೆಯಾದ ಎಸ್.ಎನ್.ಮೂಡಬಿದ್ರಿ ಪಾಲಿಟೆಕ್ನಿಕ್‌ನಲ್ಲಿ
ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು. ಆಡಳಿತ ಸಮಿತಿಯ
ಅಧ್ಯಕ್ಷ ಅಭಯಚಂದ್ರ ಜೈನ್, ಮಹಾವೀರ ಕಾಲೇಜಿನ ಪ್ರಾಂಶುಪಾಲ ಡಾ| ರಾಧಾಕೃಷ್ಣ ಶೆಟ್ಟಿ,
ಎಸ್.ಎನ್.ಎಂ. ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಜೆ. ಜೆ. ಪಿಂಟೋ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.