ಟಿಎಂಎಇಎಸ್ ಅಕಾಡೆಮಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಆ9: ನಗರದ ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಕಾಮರ್ಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಕುಮಾರಿ ಸ್ನೇಹಾ ಇ., ಮತ್ತು ಕುಮಾರಿ ದಿಯಾ ಪಿ. ಗೋಗಿ ಅವರು ಸಿಎ ಪ್ರವೇಶ ಪರೀಕೆಯಲ್ಲ್ಷಿ ಉತ್ತೀರ್ಣರಾಗಿದ್ದು, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಕುಮಾರಿ ಪ್ರೇಕ್ಷಾ ಜೈನ್ ಮತ್ತು ವೇದಾಂತ್ ಯಡವಲಿ ನಾಟಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಅಪರೂಪದ ಸಾಧನೆ ಮೆರೆದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ದಿ ಇನ್ಸ್‍ಟ್ಯೂಟ್ ಆಫ್ ಚಾರ್ಟೆಡ್ ಅಕೌಂಟಂಟ್ಸ್ ಆಫ್ ಇಂಡಿಯಾ ಪ್ರಕಟಿಸಿರುವ ಫೌಂಡೇಶನ್ ಫಲಿತಾಂಶ-2023 ರಲ್ಲಿ ಕುಮಾರಿ ಇ. ಸ್ನೇಹಾ 254 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ. ಕುಮಾರಿ ದಿಯಾ ಪಿ. ಗೋಗಿ 225 ಅಂಕಗಳನ್ನು ಪಡೆದುಕೊಂಡು ಪರೀಕ್ಷೆಯಲ್ಲಿ ಯಶಸ್ಸು ಕಂಡಿದ್ದಾಳೆ. ಕಷ್ಟಸಾಧ್ಯವಾದ ಈ ಸಿಎ ಪರೀಕ್ಷೆಯಲ್ಲಿ ಪಾಸಾದ ಈ ವಿದ್ಯಾರ್ಥಿಗಳ ಸಾಧನೆ ಇಡೀ ವಿಜಯನಗರ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.
ನ್ಯಾಶನಲ್ ಆಪ್ಟಿಟ್ಯೂಡ್ ಟೆಸ್ಟ್ ಇನ್ ಆರ್ಕಿಟೆಕ್ಚರ್ ರಾóಷ್ಟ್ರಮಟ್ಟದಲ್ಲಿ ನಡೆಸಿದ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ನಮ್ಮ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ಪ್ರೇಕ್ಷಾ ಜೈನ್ 99 ನೇ ರ್ಯಾಂಕ್ ಗಳಿಸಿಕೊಂಡಿದ್ದಾಳೆ. ಕುಮಾರ್ ವೇದಾಂತ್ ಯಡವಲಿ ಈ ಪರೀಕ್ಷೆಯನ್ನು ಉತ್ತೀರ್ಣನಾಗಿದ್ದು ವಿಶೇಷ ಸಾಧನೆ ಮೆರೆದಿದ್ದಾನೆ.
ವಿಶಿಷ್ಟ ಸಾಧನೆ ಮೆರೆದು ಕಾಲೇಜಿಗೆ ಹೆಮ್ಮೆಯ ಗರಿ ಮೂಡಿಸಿದ ಎಲ್ಲ ಸಾಧಕ ವಿದ್ಯಾರ್ಥಿಗಳನ್ನು ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಅಧ್ಯಕ್ಷರಾದ ಷ.ಬ್ರ. ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಯವರು, ಟಿಎಂಎಇ ಸಂಸ್ಥೆಯ ಉಪಕಾರ್ಯದರ್ಶಿಗಳೂ ಹಾಗೂ ಕಾಲೇಜಿನ ಸಂಸ್ಥಾಪಕರೂ ಆದ  ಟಿ.ಎಂ. ವಿಜಯಕುಮಾರ್, ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ.ಕೆ. ರವೀಂದ್ರ, ಆಡಳಿತ ಮಂಡಳಿಯ ನಿರ್ದೇಶಕರಾದ ಟಿ.ಎಂ. ಚಂದ್ರಶೇಖರ್, ಕಾಲೇಜಿನ ಪ್ರಾಚಾರ್ಯರಾದ ಪ್ರೊ. ವಿ.ಎಸ್. ದಯಾನಂದಕುಮಾರ್, ಶೈಕ್ಷಣಿಕ ವಿಭಾಗದ ಸಂಯೋಜಕರಾದ  ಪಿ. ಶೇಷಸಾಯಿ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿದ್ದಾರೆ.