ಟಿಇಟಿ ಪರೀಕ್ಷೆಯಲ್ಲಿ ಕ್ಷೌರಿಕ ವೃತ್ತಿ ನಿಂದನೆ ಖಂಡಿಸಿ : ತಾ.ಹ.ಅ. ಸ.ಸೇ. ಸಂಘ ಆಗ್ರಹ

ಲಿಂಗಸುಗೂರು.ನ.೧೦-ಪಟ್ಟಣದ ಪತ್ರಿಕಾ ಭವನದಲ್ಲಿ.ತಾಲೂಕು ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ತಾಲ್ಲೂಕು ಅದ್ಯೆಕ್ಷರಾದ ಜಗನ್ನಾಥ ಚಿತ್ತಾಪುರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ದಿನಾಂಕ ೦೬/೧೧/೨೦೨೨ ರಂದು ನಡೆದಿರುವ ಶಿಕ್ಷಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಸರ್ಕಾರ ನಿಷೇಧ ಮಾಡಿರುವ ಪದವನ್ನು ಬಳಸಿ ಸ್ವಾಭಿಮಾನ ದಿಂದ ಕ್ಷೌರಿಕ ಕಾಯಕವನ್ನು ಮಾಡುತ್ತಿರುವ ನಮಗೆ ಅವಮಾನ ಮಾಡಿರುವ ಶಿಕ್ಷಣ ಇಲಾಖೆ ಕೂಡಲೇ ಕ್ಷಮಾಪಣೆ ಕೇಳಬೇಕು. ಕರ್ನಾಟಕ ಸರಕಾರ ದಿನಾಂಕ ೨೮/೦೬/೨೦೧೬ ರಂದು ವೃತ್ತಿಗೆ ಬೈಗುಳ ವಾಗಿರುವ ಪದವನ್ನು ನಿಷೇಧ ಮಾಡಿ ಆದೇಶ ಮಾಡಿದೆ. ಆದಾಗ್ಯೂ ಶಿಕ್ಷಣ ಇಲಾಖೆ ನಿಷೇಧಿತ ಪದ ಬಳಸಿ ತಪ್ಪು ಮಾಡಿ ನಮ್ಮ ಸ್ವಾಭಿಮಾನ ವನ್ನು ಕಣಕಿ ನಮ್ಮ ಕ್ಷೌರಿಕ ವೃತ್ತಿಗೆ ಅವಮಾನಿಸಿದೆ. ನಮ್ಮ ಸ್ವಾಭಿಮಾನಕ್ಕೆ ನಮ್ಮ ವೃತ್ತಿಗೆ ಅವಮಾನಿಸಲು ಕಾರಣರಾದ ಶಿಕ್ಷಣ ಇಲಾಖೆ ಕೂಡಲೇ ಕ್ಷಮಾಪಣೆ ಕೇಳಬೇಕು ,ಹಾಗೂ ಸಂಬಂಧಿಸಿದ ಅಧಿಕಾರಿಯನ್ನು ವಜಾಗೊಳಸಿ ಜಾತಿ ನಿಂದನ ಪದ ಬಳಕೆಯಿಂದ ನೊಂದ ನಮ್ಮ ಹಡಪದ (ಕ್ಷೌರಿಕ) ಸಮಾಜದ ಪರ ನಿಲ್ಲಲು ಶಿಕ್ಷಣ ಸಚಿವರಲ್ಲಿ ವಿನಂತಿ. ಒಂದು ವೇಳೆ ನಮ್ಮ ಈ ಮನವಿಗೆ ಸ್ಪಂದಿಸಿ ಕ್ರಮ ಕೈಗೊಳ್ಳದಿದ್ದರೆ ಶಿಕ್ಷಣ ಇಲಾಖೆ ಹಾಗೂ ಸರಕಾರದ ವಿರುದ್ಧ ರಾಜ್ಯಾದ್ಯಾಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಈ ಪತ್ರಿಕಾ ಗೋಷ್ಟಿಯ ಮುಖಾಂತರ ಲಿಂಗಸುಗೂರು ತಾಲೂಕಾ ಹಡಪದ (ಕ್ಷೌರಿಕಾ) ಸಮಾಜ ಸೇವಾ ಸಂಘ ಎಚ್ಚರಿಸುತ್ತದೆ. ಎಂದು ತಾ.ಹ ಸ.ಸೇ ಸಂಘದ ಪದಾಧಿಕಾರಿಳಾದ ಮುತ್ತಣ್ಣ ಹೆಚ್ ಗುಡಿಹಾಳ. ಶರಣಬಸವ. ಕುಮಾರಸ್ವಾಮಿ. ಅದಪ್ಪ.ಅಮರೇಶ. ಚುಡಾಮಣಿ.ಚಿತಾಪೂರ್. ಇನ್ನಿತರರು ಉಪಸ್ಥಿತರಿದ್ದರು.