ಟಿಂಬರ್‌ಬಾಬು ಅಪಹರಣ ಪ್ರಕರಣ ಸುಖಾಂತ್ಯ

ಮಾಲೂರು.ಜು೭:ಜು೭:ತಾಲೂಕಿನ ತೋರನ ಹಳ್ಳಿ ಮಾಲೂರು ರಸ್ತೆಯ ಎಡಗಿನ ಬೆಲೆ ಗೇಟ್ ನ ಇಟ್ಟಿಗೆ ಕಾರ್ಖಾನೆಯ ಬಳಿ ಅಪಹರಣಕ್ಕೆ ಒಳಗಾಗಿದ್ದ ಉದ್ಯಮಿ ಟಿಂಬರ್ ಬಾಬುನನ್ನು ಅಪಹರಣಕಾರರು ಆಂಧ್ರಪ್ರದೇಶದ ಫಲಮನೇರಿಯ ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋಗಿದ್ದು ಗುರುವಾರ ರಾತ್ರಿ ಟಿಂಬರ್ ಬಾಬು ಸುರಕ್ಷಿತವಾಗಿ ಮನೆಗೆ ಬಂದಿದ್ದಾರೆ
ಬುದುವಾರ ಪಟ್ಟಣದ ಮಾರುತಿ ಬಡಾವಣೆಯ ಉದ್ಯಮಿ ಟಿಂಬರ್ ಬಾಬು ತೋರನಹಳ್ಳಿ ರಸ್ತೆಯ ಹೆಡಗಿನ ಬೆಲೆ ಗೇಟ್ ಬಳಿ ಇರುವ ಅವರ ಇಟ್ಟಿಗೆ ಕಾರ್ಖಾನೆಗೆ ಹೋಗಿ ಮಧ್ಯಾಹ್ನ ಕಾರ್ಖಾನೆಯಿಂದ ಹೊರ ಬಂದಾಗ ಯಾರು ಅಪರಿಚಿತರು ಕಾರಿನಲ್ಲಿ ಬಂದು ಅಪಹಾರಣ ಮಾಡಿಕೊಂಡು ಹೋಗಿ ಅವರ ಕುಟುಂಬಕ್ಕೆ ಬೆದರಿಕೆ ಹೊಡ್ಡಿ ೫ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಅವರ ಪುತ್ರ ಮಂಜುನಾಥ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಗುರುವಾರ ಅಪಹರಣಕಾರರುಉದ್ಯಮಿ ಟಿಂಬರ್ ಬಾಬುವನ್ನು ಆಂಧ್ರಪ್ರದೇಶದ ಫಲಮನೆರಿಯ ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋಗಿದ್ದು ಗುರವಾರ ರಾತ್ರಿ ಅಪಹರಣಕ್ಕೆ ಒಳಗಾಗಿದ್ದ ಟಿಂಬರ್ ಬಾಬು ಸುರಕ್ಷಿತವಾಗಿ ಮನೆಗೆ ಬಂದಿದ್ದಾರೆ
ಪೊಲೀಸರಿಗೆ ಅಪಹರಣಕಾರರ ಬಗ್ಗೆ ಸುಳಿವು ಸಿಕ್ಕಿದ್ದು ಆರೋಪಿಗಳನ್ನು ಬಂದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಚಿಸಿರುವ ಮೂರು ತಂಡಗಳು ಹುಡುಕಾಟ ಮಾಡುತ್ತಿದ್ದಾರೆ.