ಟಿಂಕರ್ ಮಂಜಣ್ಣಗೆ ಶಿವಸಿಂಪಿ ಸಮಾಜದಿಂದ ಸನ್ಮಾನ


ದಾವಣಗೆರೆ.ಜ.14; ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾಗಿ ನಾಮನಿರ್ದೇಶನ ಗೊಂಡ ಶಿವಸಿಂಪಿ ಸಮಾಜದ ಮುಖಂಡರಾದ  ಟಿಂಕರ್ ಮಂಜಣ್ಣನವರಿಗೆ ಶಿವಸಿಂಪಿ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಬೂಸ್ನೂರು ಗುರುಬಸಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಮುಖ್ಯ ಅಥಿತಿಗಳಾಗಿ ದೂಡಾ ಅಧ್ಯಕ್ಷರಾದ ದೇವರಮನೆ ಶಿವಕುಮಾರ್, ಚಿಗಟೇರಿ ಜಯಪ್ರಕಾಶ್  ಆಗಮಿಸಿದ್ದರು. ಈ ಸಂದರ್ಭದಲ್ಲಿ ದೇವರಮನೆ ಶಿವಕುಮಾರ್ ಅವರನ್ನು ಆತ್ಮೀಯವಾಗಿ ಗೌರವಿಸಲಾಯಿತು.  ಕಣಕುಪ್ಪಿ ಮುರುಗೇಶಪ್ಪ, ಜಗದೀಶ್ ಬಾವಿಕಟ್ಟಿ, ಹೇಮಣ್ಣ ಹೆಚ್ ಕೆ, ಶಿವಕುಮಾರ್ ಬಿ ಎಂ, ಜ್ಞಾನೇಶ್ವರ್ ಜವಳಿ ಹಾಗೂ ಸಮಾಜ ಬಂಧುಗಳು ಭಾಗವಹಿಸಿದ್ದರು.