ಟಾಸ್ ಅದೃಷ್ಟ; ಕೈ ಹಿಡಿದ ನೂತನ ಕಾಳಗಿ ತಾಲ್ಲೂಕು ಪಂಚಾಯತ ಆಡಳಿತ

ಕಾಳಗಿ:ನ.13: ಟಾಸ್ ಅದೃಷ್ಟ ಕೈಗೆ ವಲಿದು ನೂತನ ಕಾಳಗಿ ತಾಲ್ಲೂಕು ಆಡಳಿತ ಕಾಂಗ್ರೆಸ್ ಗಿಟ್ಟಿಸಿಕೊಂಡಿದೆ.
ನೂತನ ಕಾಳಗಿ ತಾಲ್ಲೂಕು ಪಂಚಾಯತ ಪ್ರಥಮ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಚುನಾವಣೆ ಗುರುವಾರ ಇಲ್ಲಿನ ತಹಸೀಲ್ದಾರ ಕಛೇರಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬಲು ಜಿದ್ದಾಜಿದ್ದಿನ ಆಯ್ಕೆ ಚುನಾವಣಾ ನಡೆದು ಕೊನೆಗೆ, ಅಧ್ಯಕ್ಷ ಕಾಂಗ್ರೆಸ್ ಅಭ್ಯರ್ಥಿ ಪುಷ್ಪಾವತಿ ಜಿತೇಂದ್ರ ಚವ್ಹಾಣ ಭೇಡಸೂರ, ಉಪಾಧ್ಯಕ್ಷ ಕಾಂಗ್ರೆಸ್ ಅಭ್ಯರ್ಥಿ ಅಕ್ಕನಾಗಮ್ಮ ನಾಗಣ್ಣಾ ಹೆಬ್ಬಾಳ ಆಯ್ಕೆಯಾಗಿದ್ದಾರೆ.
ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 6 ಸೇರಿ ಒಟ್ಟು ಒಟ್ಟು 12 ಜನ ಸದಸ್ಯರಿದ್ದಾರೆ. ಇದರಲ್ಲಿ 8 ಜನ ಮಹಿಳೆಯರು, 4 ಜನ ಪುರುಷರು, ಅಧ್ಯಕ್ಷ ಸ್ಥಾನ ಅನುಸೂಚಿತ ಜಾತಿ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಪುಷ್ಪಾ ಜಿತೇಂದ್ರ ಚವ್ಹಾಣ, ಬಿಜೆಪಿಯಿಂದ ರಾಮು ರಾಠೋಡ ನಾಮ ಪತ್ರ ಸಲಿಸಿದ್ದಾರೆ.‌ ಉಪಾಧ್ಯಕ್ಷ ಸ್ಥಾನಕ್ಕೆ ಅಕ್ಕನಾಗಮ್ಮ ನಾಗಣ್ಣಾ ಶಿಲವಂತ, ಬಿಜೆಪಿಯಿಂದ ಗೌರಮ್ಮ ಸುಭಾಷ್ಚಂದ್ರ ಚೇಗಂಟಾ ನಾಮಪತ್ರ ಸಲ್ಲಿಸಿದರು.
ನಂತರ ಯಾರೊಬ್ಬರೂ ನಾಮ ಪತ್ರ ಹಿಂದಕ್ಕೆ ತೆಗೆದುಕೊಳ್ಳದೆ ಎರಡು ಕಡೆ ಕಾಂಗ್ರೆಸ್ ಬಿಜೆಪಿ ಎರಡು ಸಮಬಲವಾದ ಕಾರಣ ಎರಡು ಪಕ್ಷದವರ ಸಮಕ್ಷೇಮದಲ್ಲಿ‌ (ಟಾಸ್)‌ ಚಿಟ್ಟಿ ಎತ್ತಲಾಯಿತು. ಅದರಲ್ಲಿ ಹೊಸಹೊಮ್ಮಿದ ಅಧ್ಯಕ್ಷ ಪುಷ್ಪಾ ಜೀತೆಂದ್ರ ಚವ್ಹಾಣ ಭೇಡಸೂರ, ಉಪಾಧ್ಯಕ್ಷ ಅಕ್ಕನಾಗಮ್ಮ ನಾಗಣ್ಣಾ ಶಿಲವಂತ ಹೆಬ್ಬಾಳ ಇವರಿಗೆ ಅದೃಷ್ಟವಲಿಯಿತು ಎಂದು ಚುನಾವಣಾ ಅಧಿಕಾರಿ ಕಲಬುರಗಿ ಉಪವಿಭಾಗ ಅಧಿಕಾರಿ ರಾಮಚಂದ್ರ ಗಡದೆ ತಿಳಿಸಿದರು.
ಆಯ್ಕೆಯಾದ ಅಭ್ಯರ್ಥಿಗಳನ್ನು ತಹಸೀಲ್ದಾರ ನೀಲಪ್ರಭ ಬಬಲಾದ ಶಾಲುಹೊದಿಸಿ ಸನ್ಮಾನಿಸಿದರು.
ಶುಭಾಶಯ ತಿಳಿಸಲು ಆಗಮಿಸಿದ ಸುನೀಲ ದೊಡ್ಡಮನಿ ಸಂಗಡ ನೇರವಾಗಿ ಅಂಬೇಡ್ಕರ್ ಪುಸ್ಥಳಿಗೆ ಮಾಲಾರ್ಪಣೆ ನೆರವೇರಿಸಿ ಪಟಾಕಿ ಸಿಡಿಸಿ ಸಂಭ್ರಮಿಸಿ ತಾಲ್ಲೂಕು ಪಂಚಾಯತ ಕಾರ್ಯಾಲಯಕ್ಕೆ ತೆರಳಿದರು. ತಾಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ ರಾಠೋಡ ಶುಭಾಶಯಗಳು ಕೊರಿದರು.
ಸಂಭ್ರಮದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಭೀಮರಾವ ತೇಗಲತಿಪ್ಪಿ, ಅನೀಲ ಜಮಾದರ, ರಮೇಶ್ ಮರಗೊಳ, ನಿಂಬೆಣಪ್ಪ ಕೋರವಾರ, ರಾಜಶೇಖರ ತಿಮ್ಮನಾಕ, ರಾಘವೇಂದ್ರ ಗುತ್ತೇದಾರ, ವಿರೂಪಾಕ್ಷಿ ಗಡ್ಡದ, ರೇವಣಸಿದ್ದಪ್ಪ ಸಾತನೂರ, ರವಿ ಯರಗೋಳ, ಶಿವರಾಜ ಪಾಟೀಲ, ಸುನೀಲ ದೊಡ್ಡಮನಿ, ಮಲ್ಲಪ್ಪ ಹೊಸಮನಿ, ಜೈಪ್ರಕಾಶ್ ಕಮಕನೊರ, ವಿಜಯಕುಮಾರ ಹೊಡೆಬಿರನಹಳ್ಳಿ, ಅಣವೀರಪ್ಪ ಟೆಂಗಳಿ, ಅವಿನಾಶ್ ಗುತ್ತೇದಾರ, ರೇವಣಸಿದ್ದಪ್ಪ ಕಟ್ಟಿಮನಿ, ಆನಂದ ಜಾಧವ್, ಜಿತೇಂದ್ರ ಚವ್ಹಾಣ, ಮಲ್ಕು ಡೊಣ್ಣೂರ, ಕಲ್ಯಾಣರಾವ ಡೊಣ್ಣೂರ, ಗಣಪತಿ ಹಾಳಕಾಯಿ ಸೇರಿದಂತೆ ಅನೇಕರು ಸಂಭ್ರಮಿಸಿದರು.


ಹೆಚ್ಚಾದ ಗುತ್ತೇದಾರ ಪ್ರತಿಷ್ಠೆ
ತಾಲ್ಲೂಕು ಪಂಚಾಯತ ಚುನಾವಣೆ ಆಯ್ಕೆಯಲ್ಲಿ ಕಾಂಗ್ರೆಸ್ಗೆ ಜಯ ಸಿಕ್ಕಿದ್ದು ಅದೃಷ್ಟ. ಸ್ಥಳಿಯರಾದ ಜಿಲ್ಲಾಧ್ಯಕ್ಷ ಕಾಂಗ್ರೆಸ್ ನಾಯಕ ಜಗದೇವ ಗುತ್ತೇದಾರ ಅವರ ಪ್ರತಿಷ್ಠೆ ಹೆಚ್ಚಾಗಿದಂತು ಸತ್ಯ.
ಅದರಲ್ಲೂ ಅರಣಕಲ್ ಜಿಲ್ಲಾ ಪಂಚಾಯತ ಸದಸ್ಯ ರಾಜೇಶ್ ಜಗದೇವ ಗುತ್ತೇದಾರ ಅವರ ಕ್ಷೇತ್ರದಿಂದ‌ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಎರಡು ಅಭ್ಯರ್ಥಿಗಳು ಆಯ್ಕೆ ಆಗಿದ್ದು ಹರ್ಷತಂದಿತ್ತಾಗಿದೆ.