ಟಾರ್ಚ ಲೈಟ್, ದೀಪ ಹಚ್ಚುವ ಮೂಲಕ ಮತದಾನ ಜಾಗೃತಿ

ಬೀದರ್:ಏ.11: ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆ ಅಂಗವಾಗಿ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಬಿ) ಹತ್ತಿರದ ಕಾರಂಜಾ ಆಣೆಕಟ್ಟಿನ ಮೇಲೆ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಣ ಅಧಿಕಾರಿ ಡಾ.ಗಿರೀಶ್ ಬಡೋಳೆ, ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಲ್, ಸ್ವೀಪ ಅಧಿಕಾರಿ ಡಾ.ಗೌತಮ ಅರಳಿ ಅವರ ಸಹಯೋಗದಲ್ಲಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಸಿಂಧು ಎಚ್.ಎಸ್. ನೇತ್ರತ್ವದಲ್ಲಿ ಸ್ವೀಪ ಬರೆದು ಟಾರ್ಚ, ಲೈಟ್, ದೀಪಗಳು ಹಚ್ಚುವ ಮೂಲಕ ವಿಶೇಷ ರೀತಿಯಲ್ಲಿ ಮತದಾನ ಜಾಗ್ರತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ 800ಕ್ಕಿಂತ ಹೆಚ್ಚಿನ ಸಿಬ್ಬಂದಿಗಳು ಪಾಲ್ಗೊಂಡಿದ್ದರು.