ಟಾಯ್ಲೆಟ್ ಬಂದ್: ಶೌಚಲಕ್ಕಾಗಿ ಸಾರ್ವಜನಿಕರ ಪರದಾಟ

ಸಂಜೆವಾಣಿ ವಾರ್ತೆ
ಹನೂರು ಮಾ 2 : – ಪಟ್ಟಣ ಪಂಚಾಯಿತಿ ವತಿಯಿಂದ ಖಾಸಗಿ ಬಸ್ ನಿಲ್ದಾಣದ ಬಳಿ ನಿರ್ಮಿಸಿರುವ ಸಾರ್ವಜನಿಕ ಶೌಚಗೃಹದ ಮ್ಯಾನ್ ಹೋಲ್ ತುಂಬಿಕೊಂಡಿರುವ ಪರಿಣಾಮ ಕಳೆದ 4 ದಿನಗಳಿಂದ ಶೌಚಗೃಹದ ಬಾಗಿಲು ಮುಚ್ಚಿದೆ. ಇದರಿಂದ ಸಾರ್ವಜನಿಕರು ಶೌಚಕ್ಕಾಗಿ ತೊಂದರೆಪಡುವಂತಾಗಿದೆ.
ಹನೂರು ತಾಲೂಕು ಕೇಂದ್ರ. ಇಲ್ಲಿಗೆ ಕೆಲಸ ಕಾರ್ಯಗಳ ನಿಮಿತ್ತ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳ ಜನರು ನಿತ್ಯ ಆಗಮಿಸುತ್ತಾರೆ. ಹನೂರಿನಲ್ಲಿ ತಹಸೀಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ, ಪೆÇಲೀಸ್ ಠಾಣೆ, ಪಶು ವೈದ್ಯಕೀಯ ಆಸ್ಪತ್ರೆ, ನ್ಯಾಯಾಲಯ, ರೈತ
ಸಂಪರ್ಕ ಕೇಂದ್ರ, ಸೇರಿದಂತೆ ಇನ್ನಿತರ ಕೆಲವು ಇಲಾಖೆಗಳಿವೆ. ಆದರೆ ಇವುಗಳಲ್ಲಿ ಸಾರ್ವಜನಿಕ ಶೌಚಗೃಹವಿಲ್ಲ. ತಹಸೀಲ್ದಾರ್ ಕಚೇರಿಯಲ್ಲಿ ಶೌಚಗೃಹವಿದ್ದರೂ ಬಳಕೆಗೆ ಬಾರದಂತಾಗಿದೆ.
ಪರಿಣಾಮ ಈ ಕಚೇರಿಗಳಿಗೆ ಆಗಮಿಸುವ ಜನರು ಹಾಗೂ ಪಟ್ಟಣದ ವಿವಿಧ ಅಂಗಡಿಗಳಲ್ಲಿ ಕೆಲಸ ಮಾಡು ಕಾರ್ಮಿಕರು ಶೌಚಕ್ಕಾಗಿ ಪಟ್ಟಣದ ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲಿರುವ ಶೌಚಗೃಹಕ್ಕೆ ಅನಿವಾರ್ಯವಾಗಿ ಹೋಗಬೇಕಾಗಿದೆ. ಆದರೆ ಪಟ್ಟಣದಲ್ಲಿ ಕೆಶಿಪ್ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಒಳಚರಂಡಿ ಮ್ಯಾನ್ ಹೋಲ್ ಬಂದ್ ಆಗಿ ಭರ್ತಿಗೊಂಡಿದೆ. ಪರಿಣಾಮ ಕಳೆದ 4 ದಿನಗಳಿಂದ ಖಾಸಗಿ ಬಸ್ ನಿಲ್ದಾಣದ ಶೌಚಗೃಹ ಹಾಗೂ ಕಳೆದ ಒಂದು ದಿನದಿಂದ ಸರ್ಕಾರಿ ಬಸ್ ನಿಲ್ದಾಣದ ಶೌಚಗೃಹಕ್ಕೆ ಬೀಗ ಬಿದ್ದಿದೆ. ಇದರಿಂದ ಸಾರ್ವಜನಿಕರು ಅದರಲ್ಲೂ ಮಹಿಳೆಯರು, ವಯೋವೃದ್ಧರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ.
ತಾಲೂಕು ಕೇಂದ್ರವಾದ ಹನೂರಿನಲ್ಲಿ ಈ 2 ಶೌಚಗೃಹವೂ ಬಂದ್ ಆಗಿರುವುದರಿಂದ ವಿಧಿ
ಯಿಲ್ಲದೇ ಕೆಲ ಪುರುಷರು ಶೌಚಗೃಹದ ಆಸುಪಾಸು ಮೂತ್ರ ಮಾಡಬೇಕಾದ ಪರಿಸ್ಥಿತಿ
ನಿರ್ಮಾಣವಾಗಿದೆ.ಇದರಿಂದ ಬಸ್ ನಿಲ್ದಾಣದ ಆಸುಪಾಸು ದುರ್ವಾಸನೆ ಬೀರುತ್ತಿದೆ. ಇದರಿಂದ ಬಸ್ ನಿಲ್ದಾಣದ ಅಂಗಡಿಗಳಲ್ಲಿ ಕಾರ್ಯನಿರ್ವ
ಹಿಸುತ್ತಿ ರುವವರು ದುರ್ವಾಸನೆ ಯನ್ನು ಅನುಭವಿಸುವಂತಾ ಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಮ್ಯಾನ್‍ಹೋಲ್ ನ ಸರಿಪಡಿಸಿ.ಶೌಚಗೃಹ ಬಳಕೆಗೆ ಕ್ರಮವಹಿಸುವಂತೆ ಸಾರ್ವಜನಿ
ಕರು ಒತ್ತಾಯಿಸಿದ್ದಾರೆ.