ಟಾಯ್ಕೊಂಡೊ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ


ಧಾರವಾಡ ಮಾ.21- ಪದವಿ ಪೂರ್ವ ಶಿಕ್ಷಣ ಇಲಾಖೆ, ಧಾರವಾಡÀ ಆಯೋಜಿಸಿದ 2020-21ನೇ ಸಾಲಿನ ಜಿಲ್ಲಾ ಮಟ್ಟದ ಬಾಲಕ ಹಾಗೂ ಬಾಲಕಿಯರ ಟಾಯ್ಕೊಂಡೊ ಕ್ರೀಡಾ ಕೂಟದಲ್ಲಿ ವಿವಿಧ ವಿಭಾಗಗಳಲ್ಲಿ ನಮ್ಮ ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 4 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿರುತ್ತಾರೆ. ಕುಮಾರ. ನಿಖಿಲ್ ಬಳ್ಳಾರಿ, ಕುಮಾರ. ನಿಖಿಲ್ ನಂದಿಗಟ್ಟಿ, ಕುಮಾರ ಸತ್ಪಾಲ್ ಪಮಡಿ, ಕುಮಾರ ಸೈರಾಜ್ ಬಲ್ಲಿಕಾರ. ಇವರು ರಾಜ್ಯ ಮಟ್ಟದ ಟಾಯ್ಕೊಂಡೊ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
ಅವರಿಗೆ ನಮ್ಮ ಸಂಸ್ಥೆಯ ಅಧ್ಯಕ್ಷರಾದ ಡಾ. ವೀಣಾ ಬಿರಾದಾರ, ಪ್ರಾಚಾರ್ಯರಾದ ಪ್ರೊ. ನಾಗರಾಜ ಶಿರೂರ ಹಾಗೂ ತರಬೇತುದಾರರಾದ ಅಂಜಲಿ ಪಿ ಕ್ಷಾತ್ರತೇಜ ಅವರು ಅಭಿನಂದಿಸಿದ್ದಾರೆ.