ಟಾಮ್ ಅಂಡ್ ಜರ‍್ರಿ ಸೆಂಟಿಮೆಂಟ್ ಅನಾವರಣ

ಕಾಮಿಡಿ.ಆಕ್ಷನ್ ,ತಾಯಿ ಮಗನ ಸಂಬಂಧದ ಕಥೆ ಹೊಂದಿರುವ “ಟಾಮ್ ಅಂಡ್ ಜೆರ್ರಿ ” ಮೋಡಿಗೆ ಸಿದ್ದವಾಗಿದೆ. ಚಿತ್ರದ ಟ್ರೈಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದ್ದೆ. ಇದೇ ಖುಷಿಯಲ್ಲಿ ಚಿತ್ರವನ್ನು ತೆರೆಗೆ ಬರಲಿದೆ. ಚೈತ್ರಾರಾವ್, ನಿಶ್ಚಿತ್ ಕರೋಡಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ರಾಜು ಶೇರಿಗಾರ್ ನಿರ್ಮಾಣ ಮಾಡಿದ್ದು ರಾಘವ್ ವಿನಯ್ ಶಿವಗಂಗೆ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ರಾಘವ, ಹೊಸತನ ಇಷ್ಟಪಡುವವರಿಗೆ ಚಿತ್ರ ಹಿಡಿಸುತ್ತದೆ. ೨ ಪಾತ್ರಗಳು ಅವರವರ ವ್ಯಕ್ತಿತ್ವಕ್ಕೆ ಅನುಸಾರವಾಗಿ ಹೋಗುತ್ತಿರುತ್ತವೆ, ಟಾಮ್ ಅಂಡ್ ಜೆರ‍್ರಿ ನಡುವೆ ಆಗಾಗ ಜಗಳ ನಡೆಯುತ್ತಲೇ ಇರುತ್ತೆ, ಹುಚ್ಚನ ಪಾತ್ರ ಇವರಿಬ್ಬರಿಗೂ ಬ್ರಿಡ್ಜ್ ಆಗಿರುತ್ತದೆ ಈ ವಾರ ತೆರೆಗೆ ಬರಲಿದೆ. ಮ್ಯಾಥ್ಯೂಸ್ ಮನು ಚಿತ್ರಕ್ಕೆ ಸಂಗೀತ, ಸಂಕೇತ್ ಛಾಯಾಗ್ರಹಣವಿದೆ.

ಹಿರಿಯ ಕಲಾವಿದರಾದ ಜೈಜಗದೀಶ್, ತಾರಾ ಅನುರಾಧಾ, ರಾಕ್‌ಲೈನ್ ಸುಧಾಕರ್, ಪದ್ಮಜಾ ರಾವ್, ಕಡ್ಡಿಪುಡಿ ಚಂದ್ರು ಸಂಪತ್ ಮೈತ್ರೇಯ, ಶೇಖರ್ ಸೇರಿ ಹಲವರಿದ್ದಾರೆ..