ಟಾಪರ್‌ಗಳಿಗೆ ಪ್ರತಿಭಾ ಸ್ಕಾಲರ್‌ಶಿಫ್

ಕೋಲಾರ,ಸೆ.೭- ಕ್ರೆಡಿಟ್ ಆಕ್ಸೆಸ್ ಗ್ರಾಮೀಣ ಲಿಮಿಟೆಡ್ ಮತ್ತು ಕ್ರೆಡಿಟ್ ಆಕ್ಸೆಸ್ ಇಂಡಿಯಾ ಫೌಂಡೇಶನ್ ವತಿಯಿಂದ ಸಿಎಸ್‌ಆರ್ ಕಾರ್ಯಕ್ರಮದಡಿಯಲ್ಲಿ ಎಸ್.ಎಸ್.ಎಲ್.ಸಿ ಟಾಪರ್ ವಿದ್ಯಾರ್ಥಿಗಳಿಗೆ “ಗ್ರಾಮೀಣ ಪ್ರತಿಭಾ ಸ್ಕಾಲರ್‌ಶಿಫ್‌ನ್ನು” ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಯಲ್ಲಿ ಬೇತಮಂಗಲ ಶಾಖೆಯಿಂದ ಶ್ರೀರುಚಿ ಮತ್ತು ಶ್ರೀನಿವಾಸಪುರ ಶಾಖೆಯಿಂದ ತಂಝಿಲಾ ಅವರಿಗೆ ವಿತರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಾರಾಯಣ್, ಸಿಎಜಿಎಲ್ ವಲಯ ವ್ಯವಸ್ಥಾಪಕ ಲೋಕೇಶ್, ಬೆಂಗಳೂರು ಪ್ರಾದೇಶಿಕ ವ್ಯವಸ್ಥಾಪಕ ನಾಗರಾಜು, ವಲಯ ವ್ಯವಸ್ಥಾಪಕ ಪ್ರಕಾಶ್ ಸಿ.ಸಿ, ಶಾಖಾ ವ್ಯವಸ್ಥಾಪಕ ಮಹೇಂದ್ರ ಉಪಸ್ಥಿತರಿದ್ದರು.