ಟಾಟಾ ಸನ್ಸ್ ಅಧ್ಯಕ್ಷ ಮಿಸ್ತ್ರಿ ನೇಮಕ ಸುಪ್ರೀಂ ಅಸಮ್ಮತಿ

ನವದೆಹಲಿ.ಮಾ೨೬: ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಸೈರಸ್ ಮಿಸ್ತ್ರಿ ಅವರನ್ನು ಪುನಃ ನೇಮಿಸಲು ಆದೇಶಿಸಿದ ೨೦೧೯ ರ ಡಿಸೆಂಬರ್ ೧೭ ರ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣದ ಆದೇಶಕ್ಕೆ ಸುಪ್ರೀಂ ಕೋರ್ಟ್ ಅಸಮ್ಮತಿ ಸೂಚಿಸಿದೆ.
ಎನ್‌ಸಿಎಲ್‌ಎಟಿ ಆದೇಶವು ಸೈರಸ್ ಮಿಸ್ಟ್ರಿಯವರನ್ನು ೧೦೦ ಬಿಲಿಯನ್ ಡಾಲರ್‌ಗಳ ಮೌಲ್ಯದ ಉಪ್ಪಿನಿಂದ ಹಿಡಿದು ತಂತ್ರಾಂಶದೊರೆಗಿನ ಟಾಟಾ ಸಂಘಟನೆಯ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಪುನಃಸ್ಥಾಪಿಸಿತ್ತು. . ಸುಪ್ರೀಂ ಕೋರ್ಟ್ ಕಳೆದ ವರ್ಷ ಜನವರಿ ೧೦ ರಂದು ಎನ್‌ಸಿಎಲ್‌ಎಟಿ ಆದೇಶವನ್ನು ತಡೆದು ಟಾಟಾ ಗ್ರೂಪ್‌ಗೆ ಪರಿಹಾರ ನೀಡಿತ್ತು.
ಇದು ’ಎರಡು-ಗುಂಪಿನ ಕಂಪನಿ’ಯಲ್ಲ ಅದರ ಮತ್ತು ಸೈರಸ್ ಇನ್ವೆಸ್ಟ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ನಡುವೆ ಯಾವುದೇ ’ಅರೆ-ಪಾಲುದಾರಿಕೆ’ ಇಲ್ಲ ಎಂದು ಟಾಟಾ ಸನ್ಸ್ ಈ ಹಿಂದೆ ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು.
ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಸೈರಸ್ ಮಿಸ್ತ್ರಿ ಅವರನ್ನು ತೆಗೆದುಹಾಕುವ ನಿರ್ಧಾರ ಸರಿಯಾಗಿದೆ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠ ಕಳೆದ ವರ್ಷ ಡಿಸೆಂಬರ್ ೧೭ ರಂದು ತೀರ್ಪನ್ನು ಕಾಯ್ದಿರಿಸಿತ್ತು.
ಮಿಸ್ತ್ರಿ ರತನ್ ಟಾಟಾ ಅವರ ನಂತರ ೨೦೧೨ ರಲ್ಲಿ ಟಾಟಾ ಸನ್ಸ್ ಅಧ್ಯಕ್ಷರಾಗಿದ್ದರು ಆದರೆ ನಾಲ್ಕು ವರ್ಷಗಳ ನಂತರ ಅವರನ್ನು ಉಚ್ಚಾಟಿಸಲಾಯಿತು.