ಟಾಟಾ ಮೋಟರ್ಸ್ ಸೌಲಭ್ಯ ಪಡೆದುಕೊಳ್ಳಿ- ಅರುಣು

ಸಿಂಧನೂರು,ಫೆ.೨೩- ನಗರದಲ್ಲಿ ನೂತನವಾಗಿ ಟಾಟಾ ಮೋಟರ್ಸ್ ಸರ್ವಿಸ್ ಟೇಷನ್ ಪ್ರಾರಂಭ ಮಾಡಿದ್ದು, ಇದರ ಪ್ರಯೋಜನವನ್ನು ತಾಲೂಕಿನ ಜನತೆ ಪಡೆದುಕೊಳ್ಳುವಂತೆ ಟಾಟಾ ಮೋಟಾರ್ಸ ರಾಜ್ಯ ಸೇವಾ ಮ್ಯಾನೇಜರ ಅರುಣು ಗಂಗಾಧರನ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ನಗರದ ಕುಷ್ಟಗಿ ರಸ್ತೆಯಲ್ಲಿರುವ ಸರ್ಕಾರಿ ಡಿಗ್ರಿ ಕಾಲೇಜಿನ ಹತ್ತಿರ ನೂತನವಾಗಿ ಟಾಟಾ ಮೋಟಾರ್ಸ ಸರ್ವಿಸ್ ಟೇಷನ್ ಉದ್ಘಾಟಿಸಿ ಮಾತನಾಡಿದ ಅವರು ಸರ್ವಿಸ್ ಟೇಷನ್‌ದಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.
ರಿಯಾಜ್ ಅಹ್ಮದ, ಫಯಾಜ್ ಅಹ್ಮದ, ಇಮ್ತಿಯಾಜ್ ಅಹ್ಮದ, ಇಲಿಯಾಸ್ ಅಹ್ಮದ್ ಈ ಯುವಕರ ಟೀಮ ಟೇಷನ್ ಪ್ರಾರಂಭ ಮಾಡಿದ್ದು, ಈ ಯುವಕರ ಕೆಲಸಕ್ಕೆ ಜನ ಪ್ರೋತ್ಸಾಹಿಸುವಂತೆ ಅವರು ಜನರಲ್ಲಿ ಕೇಳಿಕೊಂಡು.
ಸೀನಿಯರ್ ಮಾನೇಜರುಗಳಾದ ರಾಮಚಂದ್ರ ನಾಯಕ, ಪ್ರಕಾಶ ರೆಡ್ಡಿ, ಏರೀಯಾ ಮಾನೇಜರ ಮನಿಕಂದನ್ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಸಿದ್ದರು.