ಟಾಟಾ ನಗರ -ಯಶವಂತಪುರ ರೈಲು ಪುನರಾರಂಭ

ರಾಯಚೂರು.ಆ.೦೫- ಟಾಟಾನಗರ ಮತ್ತು ಯಶವಂತಪುರ ನಡುವಿನ ಎಕ್ಸಪ್ರೇಸ ಈ(ವೇಗದೂತ) ಓಡಾಟ ಪುನರಾರಂಭವಾಗಿದೆ ಎಂದು ರೈಲ್ವೆ ಬೋರ್ಡ ಸದಸ್ಯರಾದ ಬಾಬುರಾವ್ ಅವರು ತಿಳಿಸಿದ್ದಾರೆ.
ಕೊರೋನಾ ಮಹಾಮಾರಿ ಕಳೆದ ಎರಡು ವರ್ಷದಿಂದ ಈ ವಾರದ ಎಕ್ಸ್ ಪ್ರೆಸ್ ರೈಲಿನ ಓಡಾಟ ನಿಲ್ಲಿಸಲಾಗಿತ್ತು. ಈ ರೈಲಿನ ನಂಬರ್ ೧೮೧೧೧ ಇದು ಟಾಟಾ ನಗರದಿಂದ ಯಾದಗಿರ, ರಾಯಚೂರ, ಬಳ್ಳಾರಿ ಮತ್ತು ತುಮಕೂರ ಮಾರ್ಗವಾಗಿ ಯಶವಂತಪುರಗೆ ಹೋಗುತ್ತದೆ.ಈಗ ಯಶವಂತಪುರ ಟಾಟಾನಗರ ಎಕ್ಸಪ್ರೇಸ ರೈಲು ಇದೇ ಮಾರ್ಗದ ಮೂಲಕ ಪ್ರಯಾಣ ಬೆಳೆಸುತ್ತದೆ.ಬೇಡಿಕೆಗೆ ಮನ್ನಿಸಿ,ಪ್ರಯಾಣಿಕರ ಅನುಕೂಲಕ್ಕೆ ಈ ವಾರದ ರೈಲು ಸೌಲಭ್ಯ ಒದಗಿಸಿರುವುದಕ್ಕೆ ರೈಲ್ವೆ ಮಂತ್ರಿ ಅಶ್ವಿನ್ ವೈಷ್ಣವ್ ಮತ್ತು ರಾಯಚೂರ ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ್ ಅವರಿಗೆ ರೈಲ್ವೆ ಬೋರ್ಡ ಸದಸ್ಯರಾದ ಬಾಬುರಾವ್ ಅವರು ಧನ್ಯವಾದಗಳು ತಿಳಿಸಿದ್ದಾರೆ.