ಟಾಟಾ ನಗರ ಎಕ್ಸ್ ಪ್ರೆಸ್ ರೈಲಿಗೆ ಸ್ವಾಗತ

ಟಾಟಾ ನಗರ ಎಕ್ಸ್ ಪ್ರೆಸ್ ರೈಲಿಗೆ ಸ್ವಾಗತ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಅ.6- ಟಾಟಾನಗರ ಯಶವಂತಪುರ ವಾರದ ಎಕ್ಸ್ ಪ್ರೆಸ್ ರೈಲಿಗೆ ಇಂದು ಬೆಳಿಗ್ಗೆ ನಗರ್ ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಕ್ರಿಯಾ ಸಮಿತಿ ಪದಾಧಿಕಾರಿಗಳು ಸ್ವಾಗತಿಸಿ ಸಂಭ್ರಮಿಸಿದರು.
ಕೋವಿಡ್ ಹಿನ್ನಲೆಯಲ್ಲಿ‌   ನಿಲುಗಡೆ ಯಾಗಿದ್ದ ಈ ರೈಲನ್ನು  ಈಗ ಪುನಃ ಆರಂಭಿಸಿದೆ.
ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ  ಕೆ.ಯಂ.‌ ಮಹೇಶ್ವರಸ್ವಾಮಿ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ರೈಲನ್ನು ಬೆಂಗಳೂರಿನ ಯಶವಂತಪುರದ ಕಡೆಗೆ  ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ಹಂಪೇರು ಹಾಲೇಶ್ವರ ಗೌಡ, ಬಿ.ಎಸ್. ಬಸವರಾಜ್, ವಿ. ಸೂರ್ಯಪ್ರಕಾಶ್, ವಿ. ಸುಂಕಣ್ಣ ಸಂಗನಕಲ್, ಜೆ.ವಿರುಪಾಕ್ಷಿ, ಬಿ. ಎಂ. ಡಿ. ಮಂಜುನಾಥ,  ಗೋನಾಳ್ ಎಂ. ಕುಮಾರಸ್ವಾಮಿ,  ಕೆ.ಎಂ. ಶ್ರೀಹರ್ಷ ಹಾಗು ಕೋಳೂರು ಚಂದ್ರಶೇಖರಗೌಡ, ಎಲ್ಐಸಿ ಪ್ರತಿನಿಧಿಗಳ ಸಂಘದ ಕೆ.ಎಂ. ಕೊಟ್ರೇಶ ಇವರುಗಳು ಉಪಸ್ಥಿತರಿದ್ದರು.

Attachments area