ಟಾಟಾ ತೆಕ್ಕೆಗೆ ಬಿಸ್ಲೆರಿ

ನವದೆಹಲಿ, ನ. ೨೪- ದೇಶದ ಅತೀ ದೊಡ್ಡ ಕುಡಿಯುವ ನೀರಿನ ಕಂಪನಿ ಬಿಸ್ಲೆರಿಯನ್ನು ಟಾಟಾ ಸಮೂಹ ಸಂಸ್ಥೆ ತನ್ನ ತೆಕ್ಕೆಗೆ ಹಾಕಿಕೊಳ್ಳಲು ಮುಂದಾಗಿದೆ.
೬ ಸಾವಿರದಿಂದ ೭ ಸಾವಿರ ಕೋಟಿಗೆ ವಹಿವಾಟು ನಡೆಯುವ ನಿರೀಕ್ಷೆಯಿದೆ. ಕಂಪನಿಯ ಮಾಲೀಕ ರಮೇಶ್ ಚೌಹಾಣ್ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು ಪುತ್ರಿ ಜಯಂತಿ ಉದ್ಯಮ ಮುನ್ನೆಡೆಸಲು ಅಥವಾ ಇತರ ಉತ್ತರಾಧಿಕಾರಿಯನ್ನು ನೇಮಕ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ಬಿಸ್ಲೆರಿಯನ್ನು ಮಾರಾಟ ಮಾಡಲು ರಮೇಶ್ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಿರುವ ಆಡಳಿತ ಮಂಡಳಿ ೨ ವರ್ಷಗಳ ಕಾಲ ಮುಂದುವರಿಯಲಿದೆ ಎಂದು ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಟಾ ಸಮೂಹ ಸಂಸ್ಕೃತಿಯನ್ನು ಹಾಗೂ ದೃಢತೆಯನ್ನು ಗೌರವಿಸುತ್ತೇನೆ. ಬೇರೆ ಖರೀದಿಗಾರರು ಹೆಚ್ಚಿನ ಆಸಕ್ತಿ ತೋರಿದ್ದಾರೆ. ಆದರೆ ತಾವು ಟಾಟಾ ಕಂಪನಿಗೆ ಬಿಸ್ಲೆರಿಯನ್ನು ಮಾರಾಟ ಮಾಡಲು ತೀರ್ಮಾನಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.