
ಕಲಬುರಗಿ ;ಎ.6: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಟಾಕಳಿ ಗ್ರಾಮದ ಶ್ರೀ ಹಜರತ್ ಮಹಿಬೂಬ ಸುಬಾನಿ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಏ. 7 ರಿಂದ 9 ನೇ ತಾರೀಖಿನವರೆಗೂ ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನಡೆಯಲಿದೆ.
7 ಶುಕ್ರವಾರದಂದು ಶ್ರೀ ಮಹಿಬೂಬ ಸುಬಾನಿ ಜಾತ್ರಾ ಹಾಗೂ ದರ್ಗಾ ಕಟ್ಟಡ ಸಹಾಯಾರ್ಥವಾಗಿ ಅಂದು ರಾತ್ರಿ 10 ಗಂಟೆಗೆ ಶ್ರೀ ಶಿರಡಿ ಸಾಯಿಬಾಬಾ ನಾಟ್ಯಸಂಘದ ವತಿಯಿಂದ ” ಪಂಚಾಯತಿ ಪಕೀರ್” ಅರ್ಥಾತ್ “ತಂಗಿ ಮಾಡಿದ ತಪ್ಪು” ಸುಂದರ ನಾಟಕ ಜರುಗುವುದು. ಅದೇ ದಿನ ರಾತ್ರಿ 8 ಗಂಟೆಗ ಗ್ರಾಮದ ಮುಖ್ಯ ಬೀದಿಗಳಲ್ಲಿ ಗಂಧ ಮೆರವಣಿಗೆ ನಡೆಯಲಿದೆ.
ಏ.8 ಶನಿವಾರ ದೀಪೆÇೀತ್ಸವ ಮೆರವಣಿಗೆ ಹಾಗೂ ಏ. 9 ರವಿವಾರ ಸಾಯಂಕಾಲ 5 ಗಂಟೆಗೆ ಕುಸ್ತಿ ಪಟುಗಳಿಂದ ಜಂಗಿ ಕುಸ್ತಿ ಜರುಗುವುದು.
ಅಂದು ರಾತ್ರಿ 10 ಗಂಟಗೆ ” ಚಿನ್ನದ ಗೊಂಬೆ ” ಅರ್ಥಾತ್ ” ಮರಳಿ ಪಡೆದ ಮಾಂಗಲ್ಯ ” ಎಂಬ ಸುಂದರ ಸಾಮಾಜಿಕ ನಾಟಕಕ್ಕೆ ಮಠಾಧೀಶರು, ರಾಜಕಾರಣಿಗಳು, ಗ್ರಾಮದ ಹಿರಿಯ ಮುಖಂಡರು ಹಾಗೂ ಟಾಕಳಿ ಗ್ರಾಮದ ಸುತ್ತಮುತ್ತಲಿನ ಯುವ ಮುಖಂಡರು ಸೇರಿದಂತೆ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ಶ್ರೀ ಹಜರತ್ ಮಹಿಬೂಬ ಸುಬಾನಿ ಜಾತ್ರಾ ಮಹೋತ್ಸವ ಕಮೀಟಿ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.