
ಬೆಂಗಳೂರು,ಮೇ.೨೧-ಕುಡಿಯುವ ನೀರೆಂದು ಭಾವಿಸಿ ಟರ್ಪೆಂಟ್ ಆಯಿಲ್ ಕುಡಿದು ಎರಡು ವರ್ಷದ ಮಗು ಮೃತಪಟ್ಟಿರುವ ದಾರುಣ ಘಟನೆ ನೆಲಮಂಗಲ ತಾಲೂಕಿನ ಉತ್ತಾಸಿಪಾಳ್ಯದಲ್ಲಿ ನಡೆದಿದೆ.
ಅಂಜು ಫಾತೀಮಾ (೨) ಮೃತ ದುರ್ದೈವಿ.
ಅಂಜು ಫಾತಿಮಾ ಮನೆಯಲ್ಲಿದ್ದ ಕುರಿಗೆ ಬಣ್ಣ ಬಳಿಯಲು ಟರ್ಪೆಂಟ್ ಆಯಿಲ್ ತಂದಿಟ್ಟಿದ್ದರು. ಈ ವೇಳೆ ಅಂಜು ಆಟ ಆಡುವಾಡುತ್ತಾ ಕೈಗೆ ಸಿಕ್ಕಿದ ಟರ್ಪೆಂಟ್ ಆಯಿಲ್ ಬಾಟೆಲ್ ತೆರೆದು ಕುಡಿದು ಅಸ್ವಸ್ಥಗೊಂಡಿದೆ.
ಕೂಡಲೇ ಪೋಷಕರು ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.