ಟಮೋಟೋ ಬಾಕ್ಸ್ ರೂ 800ಕ್ಕೆ ಏರಿಕೆ

ಕೋಲಾರ,ಮೇ,೨೭:ನಗರದ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಟಮ್ಯೋಟೋಗೆ ಪುನಃ ಶುಕ್ರ ದಸೆ ಪ್ರಾರಂಭವಾಗಿದೆ. ಇಂದು ೧೫ ಕೆ.ಜಿ.ಯ ಟಮ್ಯೋಟೋ ಬಾಕ್ಸ್‌ಗೆ ಗರಿಷ್ಟ ರೂ ೩೦೦ ರಿಂದ ೮೦೦ ವರೆಗೆ ಏರಿಕೆಯಾಗಿರುವುದು ರೈತರಲ್ಲಿ ಸಂತಸ ತಂದಿದೆ.
ಕಳೆದ ೨ ತಿಂಗಳಿಂದ ಟಮೂಟೋ ಬಾಕ್ಸ್ ಬೆಲೆ ೧೫೦ ರೂ ರಿಂದ ೩೦೦ ಒಳಗೆ ಇದ್ದಿದ್ದು ಶುಕ್ರವಾರದಿಂದ ಟಮ್ಯೋಟೋ ಬೆಲೆ ಗರಿಷ್ಟು ರೂ ೬೦೦ ಕ್ಕೆ ಏರಿತ್ತು ಅದರೆ ಇಂದು ಗರಿಷ್ಟು ರೂ ೮೦೦ ಗಳಿಗೆ ಏರಿಕೆಯಾಗಿರುವುದು ಮಾರುಕಟ್ಟೆಯಲ್ಲಿ ರೈತರಲ್ಲಿ ಉತ್ತಮ ಲಾಭದಾಯಕ ಆಶಾಕಿರಣ ತಂದಿದೆ.
ಟಮ್ಯೋಟೂ ಎರಡು ವಿಧದಲ್ಲಿದ್ದು ನಾಟಿ ಟಮ್ಯೋಟೋ ಹಾಗೂ ಸೀಡ್ ಟಮ್ಯೋಟೋ ಅಗಿದ್ದು ಈ ಪೈಕಿ ನಾಟಿ ಟಮ್ಯೋಟೋ ರೂ ೧೦೦ ಗಳಿಂದ ೭೦೦ ವರೆಗೆ ಸೀಡ್ ಟಮ್ಯೋಟೋ ರೂ ೧೦೦ ಗಳಿಂದ ೮೦೦ ವರೆಗೆ ಹರಾಜಿನಲ್ಲಿ ಮಾರಾಟವಾಗಿದೆ.
ಟಮ್ಯೋಟೋಗಳು ಗುಣ ಮಟ್ಟ,ಅಕಾರ (ಸೈಸ್) ಮೇಲೆ ಬೆಲೆಗಳು ನಿಗಧಿಯಾಗಲಿದೆ.ಉತ್ತಮ ಕಂಪನಿಯ ಸೀಡ್‌ಗಳು ಇದ್ದು ಗಿಡಗಳನ್ನು ಉತ್ತಮವಾದ ಗೊಬ್ಬರ ಹಾಗೂ ಔಷಧಿಗಳನ್ನು ಸಿಂಪಡಿಸಿ ಬೆಳೆದಿದ್ದರೆ ಉತ್ತಮ ಬೆಲೆ ಸಿಗಲಿದೆ. ಮುಂದೆ ಮಳೆಗಾಲ ಪ್ರಾರಂಭವಾಗುವುದರಿಂದ ಟಮ್ಯೋಟೋ ದರಗಳು ಇನ್ನು ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಟಮ್ಯಾಟೋ ವ್ಯಾಪಾರಿಗಳು ತಿಳಿಸಿದ್ದಾರೆ.