ಕೋಲಾರ,ಜೂ,೯- ಬಾಯರ್‍ಸ್ ಸೆಮೀಸ್ ನಾಟಿ ಟೊಮೋಟೋ ೮೩೨೩ ಎಂಬ ತಳಿಯ ಕ್ಷೇತ್ರೋತ್ಸವವನ್ನು ತಾಲೂಕಿನ ರಾಜಕಲ್ಲಹಳ್ಳಿ ಗ್ರಾಮದ ರೈತ ಪಾರ್ಥಸಾರಥಿ ಅವರ ಟೊಮೋಟೋ ತೋಟದಲ್ಲಿ ಹಮ್ಮಿಕೊಂಡು ಪ್ರಾತ್ಯಕ್ಷತೆ ಮೂಲಕ ರೈತರಿಗೆ ಅರಿವು ಮೂಡಿಸಲಾಯಿತು.
ಇಂತಹ ವಾತಾವರಣದಲ್ಲೂ ಈ ತಳಿಯು ಉತ್ತಮ ಇಳುವರಿ, ಒಳ್ಳೆಯ ದೃಢತೆ ಹಾಗೂ ಗುಣಮಟ್ಟದಿಂದ ಕೂಡಿರುವುದನ್ನು ಕಂಡು ರೈತರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿ ಸಂತಸಪಟ್ಟರು. ಈ ತಳಿಯು ಬಂದಿದ್ದ ರೈತರನ್ನು ಆಕರ್ಷಿಸುವಂತೆ ಕಂಗೊಳಿಸುತ್ತಿತ್ತು.
ಕಾರ್ಯಕ್ರಮದಲ್ಲಿ ಬಾಯರ್‍ಸ್ ಸೆಮೀಸ್ ಪ್ರಾದೇಶಿಕ ವ್ಯವಸ್ಥಾಪಕ ಸೋಮನಾಥ್, ಮಾರುಕಟ್ಟೆ ಅಭಿವೃದ್ಧಿ ಅಧಿಕಾರಿ ರಾಜೀವ್ ಕೊಪ್ಪಾರ್, ವಿಭಾಗೀಯ ವ್ಯವಸ್ಥಾಪಕ ಸುನೀಲ್‌ಕುಮಾರ್, ಕೇಶವಾನಂದ ಹಾಗೂ ರೈತರು ಉಪಸ್ಥಿತರಿದ್ದರು.