ಟಕೀಲಾ ಚಿತ್ರಕ್ಕೆ ಹಾಡು ಬಾಕಿ

ಟಕೀಲಾ ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ತೆರೆಗೆ ಬರುವ ಸಾದ್ಯತೆಗಳಿವೆ. ನಿರ್ದೇಶಕ ಮರಡಿಹಳ್ಳಿ ನಾಗಚಂದ್ರ ನಿರ್ಮಿಸುತ್ತಿರುವ ‘ಟಕೀಲಾ’ಚಿತ್ರಕ್ಕೆ  ಶೀರ್ಷಿಕೆ ಹಾಡಿನ ಚಿತ್ರೀಕರಣ ಬಾಕಿ ಇದ್ದು  ಮುಂದಿನ ವಾರ  ಚಿತ್ರೀಕರಣ ನಡೆಯಲಿದೆ.  ಈ ಹಾಡಿನೊಂದಿಗೆ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ನಿರ್ಮಾಪಕ ಮರಡಿಹಳ್ಳಿ ನಾಗಚಂದ್ರ ಹೇಳಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ತಿಂಗಳು ಚಿತ್ರ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಚಿತ್ರೀಕರಣ, ಬೆಂಗಳೂರು, ದೇವರಾಯನದುರ್ಗ, ಸಕಲೇಶಪುರದಲ್ಲಿ ನಡೆದಿದೆ‌ ಎಂದರು.

ವಾರಕ್ಕೆ 8 ರಿಂದ 10 ಸಿನಿಮಾ ತೆರೆಗೆ‌ ಬರುತ್ತಿವೆ. ಸೂಕ್ತ ಸಮಯ ನೋಡಿಕೊಂಡು ಚಿತ್ರವನ್ನು ತೆರೆಗೆ ತರಲಾಗುವುದು. ಇದಕ್ಕಾಗಿ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು‌ ನಿರ್ಮಾಪಕ ನಾಗಚಂದ್ರ ಮಾಹಿತಿ ಹಂಚಿಕೊಂಡಿದ್ದಾರೆ.

ಚಿತ್ರಕ್ಕೆ  ಕೆ.ಪ್ರವೀಣ್ ನಾಯಕ್  ಆಕ್ಷನ್ ಕಟ್ ಹೇಳಿದ್ದಾರೆ.  ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಮತ್ತು  ನಿಖಿತಾ ಸ್ವಾಮಿ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಪಿ.ಕೆ.ಹೆಚ್. ದಾಸ್   ಛಾಯಾಗ್ರಹಣ ಟಾಪ್‍ಸ್ಟಾರ್ ರೇಣು  ಸಂಗೀತ ಚಿತ್ರಕ್ಕಿದೆ. ಆರ್.ತ್ಯಾಗರಾಜ್, ಗಿರೀಶ್ ಕಂಪ್ಲಾಪುರ್, ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಚಿತ್ರದಲ್ಲಿ ಧರ್ಮ ಕೀರ್ತಿರಾಜ್, ನಿಖಿತಾ ಸ್ವಾಮಿ, ನಾಗೇಂದ್ರ ಅರಸ್, ಕೋಟೆ ಪ್ರಭಾಕರ್ ಸುಮನ್, ಜಯರಾಜ್, ಸುಷ್ಮಿತಾ, ಪ್ರವೀಣ್ ನಾಯಕ್, ಮುಂತಾದವರಿದ್ದಾರೆ.