ಟಂಟಂ ಬೈಕ್ ನಡುವೆ ಡಿಕ್ಕಿ: ಬೈಕ್ ಸವಾರ ಸಾವು

ಚಿಂಚೋಳಿ,ಅ.17- ತಾಲೂಕಿನ ಮೀರಿಯಾಣ ಪೆÇಲೀಸ್ ಠಾಣೆ ವ್ಯಾಪ್ತಿಯ ಚಿಂಚೋಳಿ ತಾಂಡೂರ ರಾಜ್ಯ ಹೆದ್ದಾರಿ ನಯಾರಾ ಪೆಟ್ರೋಲ್ ಪಂಪ್ ಹತ್ತಿರ ಬೈಕ್ ಮತ್ತು ಟಂಟಂ ಮಧ್ಯೆ ಶನಿವಾರ ಸಂಜೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ತೆಲಂಗಾಣ ರಾಜ್ಯದ ತಾಂಡೂರ ತಾಲೂಕಿನ ಐನೋಳಿ ಗ್ರಾಮ ದಸರ್ಪರಾಜ್ ಸೈಯದಸಾಬ ಸವಾರಿ (25) ಎಂಬ ಯುವಕ ಮೃತ ಪಟ್ಟಿದ್ದು, ಕಲ್ಲೂರ ಚೆಟ್ಟಿನಾಡ ಸಿಮೆಂಟ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಈತ ಬೆಳಗ್ಗೆ 10.00 ಗಂಟೆಗೆ ಕೆಲಸ ಮುಗಿಸಿಕೊಂಡು
ತನ್ನ ಸಹೋದರಿ ಜತೆಗೆ ತೆಲಂಗಾಣ ರಾಜ್ಯದ ತಾಂಡೂರಿಗೆ ಹೋಗುತ್ತಿದ್ದಾಗ ತಾಂಡೂರಿನಿಂದ ಚಿಂಚೋಳಿಯತ್ತ ವೇಗವಾಗಿ ಹೊರಟಿದ್ದ ಟಂಟಂ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ಆತನ ಸಹೋದರಿ ರೇಷ್ಮಾ ನಜೀರ್ ಪಟೇಲ ಅವರ ಕಾಲು ಮುರಿದಿದ್ದು, ಚಿಂಚೋಳಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಮಿರಿಯಾಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಿರಿಯಾಣ ಠಾಣೆಯ ಪಿಎಸ್‍ಐ- ಎ.ಎಸ್. ಪಟೇಲ್, ಅವರು ತಿಳಿಸಿದ್ದಾರೆ.