ಟಂಟಂ ಪಲ್ಟಿ: ಒಬ್ಬ ಸಾವು, ಮೂವರಿಗೆ ಗಾಯ

ಕಲಬುರಗಿ,ಜೂ.11-ಜಿಲ್ಲೆಯ ಮಹಾಗಾಂವ-ಚಿಂಚೋಳಿ ರಸ್ತೆಯ ಹರಕಟ್ಟಿ ಕ್ರಾಸ್ ಹತ್ತಿರ ಟಂಟಂ ಪಲ್ಟಿಯಾಗಿ ಅದರಲ್ಲಿದ್ದ ಓರ್ವ ಪ್ರಯಾಣಿಕ ಸ್ಥಳದಲ್ಲಿಯೇ ಮೃತಪಟ್ಟು, ಮೂವರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಮೃತನನ್ನು ಅರಣಕಲ್ ಸಿಂಘಾನಿ ತಾಂಡಾ ನಿವಾಸಿ ಗಂಗಾರಾಮ ಗನ್ನು ಜಾಧವ್ (30) ಎಂದು ಗುರುತಿಸಲಾಗಿದೆ.
ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.