ಟಂಟಂನಿಂದ ಬಿದ್ದು ಯುವಕ ಸಾವು

ಕಲಬುರಗಿ,ಸೆ.27-ಟಂಟಂನಿಂದ ಆಯತಪ್ಪಿ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ಹಡಗಿಲ್ ಹಾರುತಿ ಬಳಿ ಇಂದು ನಸುಕಿನಜಾವ ನಡೆದಿದೆ.
ಮೇಳಕುಂದಿ ಗ್ರಾಮದ ಸಿದ್ಧಾರೂಢ ತಂದೆ ಶರಣಬಸಪ್ಪ ಗೌನಳ್ಳಿ (17) ಮೃತಪಟ್ಟ ಯುವಕ.
ಟಂಟಂನಲ್ಲಿ ಇಂದು ಬೆಳಿಗ್ಗೆ ಹಾವನೂರ ಗ್ರಾಮಕ್ಕೆ ರೇಷ್ಮೆ ಹುಳು ತರಲು ಹೋಗಿದ್ದರು. ಮರಳಿ ಬರುತ್ತಿದ್ದಾಗ ಹಡಗಿಲ್ ಹಾರುತಿ ಗ್ರಾಮದ ಬಳಿ ಟಂಟಂಗೆ ಹಂದಿ ಅಡ್ಡ ಬಂದಿದ್ದರಿಂದ ಟಂಟಂ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಸಿದ್ಧಾರೂಢ ಟಂಟಂನಿಂದ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದೆ.