ಝುಂಜರವಾಡ ಪಿಕೆಪಿಎಸ್ ಸವದಿ ಬೆಂಬಲಿತ ಪೆನಲ್ ಗೆ ಭರ್ಜರಿ ಗೆಲುವು

ಅಥಣಿ : ಆ.14:ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಶನಿವಾರ ಜರುಗಿದ ಪಿಕೆಪಿಎಸ್ ಚುನಾವಣೆಯಲ್ಲಿ ಶಾಸಕ ಲಕ್ಷ್ಮಣ ಸವದಿ ಬೆಂಬಲಿತ ಪೆನಲ್ ನ ಅಭ್ಯರ್ಥಿಗಳಾದ ಭೂಪಾಲ್ ಹಳಿಂಗಳಿ ಅವರು ಅಧ್ಯಕ್ಷರಾಗಿ ಮಹಾಂತೇಶ ಚಿಪ್ಪಾಡಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ,

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಭೂಪಾಲ್ ಹಳಿಂಗಳಿ ಅವರು ಮಾತನಾಡಿ ಲಕ್ಷ್ಮಣ ಸವದಿ ಅವರ ಸಹಕಾರದಿಂದ ಅವರ ಪೆನಲ್ ಅಭ್ಯರ್ಥಿಗಳು ಸಹಕಾರ ಕೊಟ್ಟು ಈ ಚುನಾವಣೆಯಲ್ಲಿ ನನಗೆ ಅಧ್ಯಕ್ಷರಾಗಲು ಅವಕಾಶ ಕಲ್ಪಿಸಿದ್ದಾರೆ ಅದೇ ರೀತಿಯಾಗಿ ಜನಪರವಾದ ಮತ್ತು ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ತಂದು ಉತ್ತಮ ಆಡಳಿತ ನಡೆಸುತ್ತೇನೆ ಮತ್ತು ಚುನಾವಣೆ ಸಂದರ್ಭದಲ್ಲಿ ಹೇಳಿದ ಭರವಸೆಯನ್ನು ಈಡೇರಿಸುತ್ತೆವೆ ಎಂದು ಹೇಳಿದರು.

ಈ ವೇಳೆ ಮನೋಹರ ನೇಮಗೌಡ , ಮೈನೂಸಾಬ್ ಮಲಿಕಗೋಳ , ಪರಸಪ್ಪ ಕಾಂಬಳೆ, ಪದ್ಮಾವತಿ ಪಾಟೀಲ್, ಪಾಂಡುರಂಗ ನೇಮಗೌಡ, ಬಾಹುಬಲಿ ಪಾಟೀಲ್, ವೆಂಕಣ್ಣಗೌಡ ಪಾಟೀಲ್, ವೆಂಕಪ್ಪ ನೇಮಗೌಡ, ಆದಿನಾಥ್ ಯಂಡೋಳ್ಳಿ, ಅಂಜನಾ ಯಂಡೋಳ್ಳಿ, ಕಾರ್ಯದರ್ಶಿ ಮಹಾಂತೇಶ ಅಥಣಿ, ಪಿಕೆಪಿಎಸ್ ಸಿಬಂದಿ ವರ್ಗ, ಸದಾಶಿವ ಜಗದಾಳ, ಕುಮಾರ ಸನದಿ, ಶಾಂತು ಕೋಳಿ, ಚಂದು ತೇಲಿ, ಮುತಣ್ಣ ಹಿಡಕಲ್, ಶೀತಲ್ ಪಾಟೀಲ್, ರಾವಸಾಬ ಸಂಕೋನಟ್ಟಿ ಉಪಸ್ಥಿತರಿದ್ದರು, ಚುನಾವಣೆ ಅಧಿಕಾರಿಗಳಾಗಿ ಎಸ್ ಬಿ ಚಿನಗೊಂಡಿ ಕಾರ್ಯವನ್ನು ನಿರ್ವಹಣೆ ಮಾಡಿದರು.