ಝಳಕಿ ಬಳಿ ಹೆದ್ದಾರಿಗೆ ಕೆಳ ಸೇತುವೆ ನಿರ್ಮಾಣದ ಭರವಸೆ:ಉಪವಾಸ ಸತ್ಯಾಗ್ರಹ ಅಂತ್ಯಚಡಚಣ:ನ.8:ಸಮೀಪದ ಝಳಕಿ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ 13 ಕ್ಕೆ ನಿರ್ಮಾಣವಾಗುತ್ತಿರುವ ಚತುಷ್ಫತ ರಸ್ತೆಗೆ ಕೆಳ ಸೇತುವೆ ನಿರ್ಮಿಸಬೇಕು ಎಂದು ಕಳೆದ ಆರು ದಿನಗಳಿಂ ನಡೆಸುತ್ತಿದ್ದ ಸರದಿ ಉಪವಾಸ ಸ್ಥಳಕ್ಕೆ ಶನಿವಾರ ಸಂಸದ ರಮೇಶ ಜಿಗಜಿಣಗಿ ಆಗಮಿಸಿ ನಿರ್ಮಾಣದ ಭರವಸೆ ನೀಡಿದ ನಂತರ ಸತ್ಯಾಗ್ರಹ ಅಂತ್ಯಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ರಮೇಸ ಜಿಗಜಿಣಗಿ,ಕೆಳ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದ್ದು,ಕೆಳ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.ಕೆಲವೇ ದಿಗಳಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಆಂಭಗೊಳ್ಳಲಿದೆ.ಆದ್ದರಿಂದ ಗ್ರಾಮಸ್ಥರು ಸತ್ಯಾಗ್ರಹ ಕೈ ಬಿಡಬೇಕು ಎಂದು ಮನವಿ ಮಾಡಿದರು.
ಸಂಸದರ ಮನವಿಗೆ ಸ್ಪಂದಿಸಿದ ಗ್ರಾಮಸ್ಥರು ಸತ್ಯಾಗ್ರಹ ಕೈ ಬಿಡುವದಾಗಿ ಘೋಷಿಸಿದರು.ಸತ್ಯಾಗ್ರಹಿಗಳಿಗೆ ತಂಪು ಪಾನೀಯ ಕುಡಿಸುವ ಮೂಲಕ ಅವರನ್ನು ಬಿಳ್ಕೊಡಲಾಯಿತು.
ಈ ಸಂಸರಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಭಿಮಾಶಂಕರ ಬಿರಾದಾರ,ಶಿವಶರಣ ಭೈರಗೊಂಡ,ಇಂಡಿ ಬಿಜೆಪಿ ಮಂಡಳ ಅಧ್ಯಕ್ಷ ಮಲ್ಲಿಕಾರ್ಜುನ ಕ್ಯೂಡೆ,,ಚಡಚಣ ಮಂಡಳ ಅಧ್ಯಕ್ಷ ರಾಮ ಅವಟಿ,ಜೆಡಿಎಸ್‌ ಮುಖಂಡ ಬಿ.ಡಿ.ಪಾಟೀಲ,ಮುಖಂಡರಾದ ಕಾಸುಗೌಡ ಬಿರಾದಾರ,ಶ್ರೀಶೈಲಗೌಡ ಪಾಟೀಲ( ಇಂಡಿ),ಪೀರಪ್ಪ ಅಗಸರ,ಶ್ರೀಮಂತ ಕಾಪಸೆ,ಅಣ್ಣಪ್ಪ ತಳವಾರ,ಅಶೋಕ ಜಹಗೀರದಾರ,ನಿಂಗನಗೌಡ ಬಗಲಿ,ಮಲ್ಲಿಕ್‌ಸಾಬ ಮುಲ್ಲಾ,ಇಕ್ಬಾಲ ಪಠಾಣ,ಗೋಪಾಲ ಜಹಗೀರದಾರ,ವಿಠ್ಠಲ ಡೊಳ್ಳಿ .ರವಿ ತೇಲಿ ಸೇರಿದಂತೆ ಗ್ರಾಮಸ್ಥರು ಇದ್ದರು..