ಝಳಕಿ(ಬಿ) ಭೋಗೇಶ್ವರ ಜಾತ್ರಾ ಮಹೋತ್ಸವ

ಆಳಂದ :ಏ.27:ತಾಲ್ಲೂಕಿನ ಸುಕ್ಷೇತ್ರ ಝಳಕಿ(ಬಿ) ಗ್ರಾಮದಲ್ಲಿ ಶ್ರೀ ಭೋಗೇಶ್ವರ ಜಾತ್ರಾ ಮಹೋತ್ಸವ ನಡೆಯಿತು. ಎರಡು ದಿನಗಳ ಕಾಲ ಶ್ರೀ ಶಾಂತಬಸವ ಶಿವಾಚಾರ್ಯರಿಂದ ಪ್ರವಚನ ಕಾರ್ಯಕ್ರಮ ನಡೆಯಿತು.
ಮತ್ತು ಉಚಾಯಿ ಕಾರ್ಯಕ್ರಮ ನಡೆಯಿತು . ಪಲ್ಲಕ್ಕಿ, ಪುರವಂತಿಕೆ ಕುಣಿತ, ನಂದಿಕೊಲ, ಹಲಗಿ ವಾಲಗ, ಮತ್ತು ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿಯವರ ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು ಗುಂಡಣ್ಣ ಡಿಗ್ಗಿ ಕಾರ್ಯಕ್ರಮ ಉದ್ಘಾಟಿಸಿ ಗರ್ವ ಮತ್ತು ಅಹಂ ಇವೆರಡು ಸತ್ಯವನ್ನು ಸ್ವಿಕರಿಸುವುದಿಲ್ಲ ಬದಲಾಗಿ ಜೀವನ ಅವನತಿಯತ್ತ ಸಾಗಿಸುತ್ತದೆ , ನಗು ಎಲ್ಲಾ ರೋಗಗಳಿಗೆ ಮದ್ದು ಆದ ಕಾರಣ ಮನುಷ್ಯ ಯಾವಾಗಲು ನಗುತಿರಬೇಕು ಎಂದರು. ಸಭೆಯಲ್ಲಿದ್ದ ಎಲ್ಲರನ್ನು ನಗಿಸಿದರು. ಗುಂಡಣ್ಣ ಡಿಗ್ಗಿಯವರ ಸಂಗಡಿಗ ಜ್ಯೂನಿಯರ್ ರಾಜಕುಮಾರ (ಹೇಮಂತ) ಹಲವಾರು ಹಾಸ್ಯ ಚಟಾಕಿಗಳೊಂದಿಗೆ ಮಾನವೀಯ ಮೌಲ್ಯಗಳ ಬಗ್ಗೆ ಅರಿವು ಮೂಡಿಸಿ ನೆರೆದವರನ್ನು ರಂಜಿಸಿದರು.ಈ ಎಲ್ಲಾ ಸಾಂಸ್ಕøತಿಕ ಕಾರ್ಯಕ್ರಮಗಳು ಜಾತ್ರೆಗೆ ರಂಗು ನೀಡಿದವು. ಶ್ರೀ ಶಾಂತ ಬಸವ ಶಿವಾಚಾರ್ಯರ ನೇತೃತ್ವದಲ್ಲಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಜಾತ್ರೆಯಲ್ಲಿ ಸುತ್ತ ಮುತ್ತಲಿನ ಭಕ್ತರು ಭಾಗವಹಿಸಿದರು. ಭೋಗೇಶ ನಾವದಗಿ, ಶ್ಯಾಮರಾವ ಮಡಿವಾಳ, ಸಂಗೀತ ಸೇವೆ ನೀಡಿದರು.