ಝಂಡೆಕಟ್ಟೆ ಪುನರ್ ನಿರ್ಮಿಸಲು ಮನವಿ

ದಾವಣಗೆರೆ. ನ.೧೯;  ನಗರದ ಎಂ.ಬಿ ಕೇರಿಯಲ್ಲಿ ನೂರಾರು ವರ್ಷ ಇತಿಹಾಸವಿರುವ ಝಂಡೆಕಟ್ಟೆಯನ್ನು ಪುನರ್ ನಿರ್ಮಿಸಿಕೊಡುವಂತೆ ಒತ್ತಾಯಿಸಿ ಗುರುವಾರ ಬಹುಜನ ಸಮಾಜ ಪಾರ್ಟಿ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.ಪಾಲಿಕೆಯು ಯಾವುದೇ ನೋಟೀಸ್ ನೀಡದೆ ಧಾರ್ಮಿಕ ಕೇಂದ್ರವಾದ ಝಂಡೆಕಟ್ಟೆಯನ್ನು ಒಡೆದು ಹಾಕಿದ್ದು, ಇದರಿಂದ ಧಾರ್ಮಿಕ ಅಲ್ಪಸಂಖ್ಯಾತರ ಭಾವನೆಗೆ ನೋವಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಜಿಲ್ಲಾಡಳಿತ ಝಂಡೆಕಟ್ಟೆ ಪುನರ್ ನಿರ್ಮಿಸಿಕೊಡಬೇಕು. ಇಲ್ಲವಾದರೆ ಜಿಲ್ಲಾಡಳಿತ ಮುಂಭಾಗ ಧರಣಿ ನಡೆಸಲಾಗುವುದೆಂದು ರಾಜ್ಯ ಕಾರ್ಯದರ್ಶಿ ಹೆಚ್. ಮಲ್ಲೇಶ್, ಜಿಲ್ಲಾಧ್ಯಕ್ಷ ಡಿ. ಹನುಮಂತಪ್ಪ ಎಚ್ಚರಿಕೆ ನೀಡಿದ್ದಾರೆ.