ಜ20 ರಂದು ಉದ್ಯೋಗ ಮೇಳ

ಹುಬ್ಬಳ್ಳಿ,ಜ17: ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ನಿಗಮ, ಜಿಲ್ಲಾ ಕೌಶಲ್ಯ ಮಿಶನ್ ಧಾರವಾಡ, ಕಾಲೇಜು ಶಿಕ್ಷಣ ಇಲಾಖೆ ಧಾರವಾಡ, ಐ.ಬಿ.ಎಮ್.ಆರ್ ಕಾಲೇಜು ಹುಬ್ಬಳ್ಳಿ, ಜಿಟಿಟಿಸಿ ಹುಬ್ಬಳ್ಳಿ ಹಾಗೂ ವಿಜಯಲಕ್ಷ್ಮಿ ಗೇರ್ಸ್ ಹುಬ್ಬಳ್ಳಿ ಸಹಭಾಗಿತ್ವದಲ್ಲಿ ಜಿಲ್ಲಾಮಟ್ಟದ ಉದ್ಯೋಗ ಮೇಳವನ್ನು ಜ.20 ಬೆಳಿಗ್ಗೆ 9 ಗಂಟೆಗೆ ಇಲ್ಲಿನ ಅಕ್ಷಯ ಕಾಲೋನಿಯ ಐ.ಬಿ.ಎಮ್.ಆರ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಡಾ.ಚಂದ್ರಪ್ಪ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಸರ್ವರಿಗೂ ಉದ್ಯೋಗ” ಉದ್ಯೋಗ ಮೇಳ – 2022-23 ಎಂಬ ಶೀರ್ಷಿಕೆಯ ಅಡಿಯಲ್ಲಿ ನಡೆಯುವ ಈ ಮೇಳದಲ್ಲಿ ಜಿಲ್ಲೆಯ ಯುವಕ-ಯುವತಿಯರಿಗೆ ಕೌಶಲ್ಯದ ಜೊತೆಗೆ ಉದ್ಯೋಗ ಒದಗಿಸುವ ಉದ್ದೇಶ ಹೊಂದಿದೆ. ಐ.ಟಿ.ಐ, ಡಿಪೆÇ್ಲಮಾ, ಪಾಲಿಟೆಕ್ನಿಕ್, ಪದವಿ ಸೇರಿದಂತೆ ಇನ್ನಿತರ ಪದವೀಧರರು ಭಾಗವಹಿಸಬಹುದು. ಉದ್ಯೋಗ ಮೇಳದಲ್ಲಿ 48 ಕಂಪನಿಗಳು ಅಭ್ಯರ್ಥಿಗಳನ್ನು ಸಂದರ್ಶನ ಮಾಡಲಿದ್ದಾರೆ. ಸುಮಾರು 3670 ಪ್ಲೇಸ್ ಮೆಂಟ್ ಇದೆ. ಇದಕ್ಕೆ ಈಗಾಗಲೇ 920 ವಿದ್ಯಾರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ. ಆಸಕ್ತರು ತಿತಿತಿ.sಞiಟಟ ಛಿoಟಿಟಿeಛಿಣ.ಞoushಚಿಟಞಚಿಡಿ.ಛಿom/ಛಿಚಿಟಿಜiಜಚಿಣeoಡಿg ಯಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎ.ಎಮ್.ಶೆಟ್ಟರ್, ರವಿ ಎ, ಎನ್, ರಿಯಾಜ್ ಬಸರಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.