ಜ:10ರಂದು ಪ್ರತಿಭಾ ಪುರಸ್ಕಾರ

ಮೈಸೂರು: ಜ:07: ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರ ಸಂಘವು 25ನೇ ವಾರ್ಷಿಕ ಪ್ರತಿಭಾ ಪುರಸ್ಕಾರ , ನಿವೃತ್ತ/ಬಡ್ತಿ ಹೊಂದಿದ ನೌಕಕರು, ಸಾಧಕರು ಮತ್ತು ಸಮಾಜ ಸೇವಕರ ಸನ್ಮಾನ ಹಾಗೂ ನುಡಿನಮ ಸಮಾರಂಭವನ್ನು ಜ:10 ಸೋಮವಾರ ಬೆಳಿಗ್ಗೆ 10:30ಕ್ಕೆ ನಗರದ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೊಸದುರ್ಗ ಭಗೀರಥ ಪೀಠದ ಶ್ರೀ ಶ್ರೀ ಶ್ರೀ ಜಗದ್ಗುರು ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ, ಉದ್ಘಾಟನೆಯನ್ನು ಮೈಸೂರು ವಿಶ್ವವಿದ್ಯಾನಿಲಯ ಕುಲಪತಿಗಳಾದ ಪ್ರೊ. ಜಿ. ಹೇಮಂತ್‍ಕುಮಾರ್, ಮಳ್ಳವಳ್ಳಿಯ ಅಯ್ಯನ ಸರಗೂರು ಮಠದ ಶ್ರೀ ಶ್ರೀ ಶ್ರೀ ಚಿನ್ನಸ್ವಾಮೀಜಿ, ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರ ಸಂಘದ ಅಧ್ಯಕ್ಷ ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಆರ್. ಸೋಮಶೇಖರ್ ಸೇರಿದಂತೆ ಇತರ ಗಣ್ಯರು ಆಗಮಿಸಲಿದ್ದಾರೆಂದು ಸಂಘದ ಗೌರವ ಸಲಹೆಗಾರರಾದ ಡಾ. ಕೆ. ಸೋಮಶೇಖರ್ ತಿಳಿಸಿದರು.