ಜ:04 ತತ್ವ ಪದಕಾರ ಕಡಕೋಳ ಮಡಿವಾಳೇಶ್ವರ ಜಾತ್ರಾ

ಯಡ್ರಾಮಿ:ಡಿ.24:ತತ್ವ ಪದಕಾರ ಮಡಿವಾಳೇಶ್ವರ ಅವರ 201 ನೇ ವರ್ಷದ ಜಾತ್ರಾ ಮಹೋತ್ಸವವೂ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅತೀ ವಿಜೃಂಭಣೆಯಿಂದ ಮಾಡಲಾಗುವುದು ಎಂದು ಪೂಜ್ಯ ಡಾ.ರುದ್ರಮುನಿ ಶಿವಾಚಾರ್ಯರು ಕಡಕೋಳ ಮಠ ಅವರು ತಿಳಿಸಿದ್ದಾರೆ.
ಶನಿವಾರ ಸಾಯಂಕಾಲ ಕಡಕೋಳ ಮಠದ ಆವರಣದಲ್ಲಿ ಪತ್ರಿಕಾ ಗೋಷ್ಠೀ ಮೂಲಕ ಮಾತನಾಡಿದ ಶ್ರೀಗಳು.ತತ್ವ ಪದಕಾರ ಮಡಿವಾಳಪ್ಪ ನವರ ಅನುಭಾವದ ಜಾತ್ರೆಯೂ ಜರಗುವುದು.
ಡಿ.27 ಬುಧವಾರ ದಿಂದ ಜ.02 ಮಂಗಳವಾರದ ವರೆಗೂ ಮಡಿವಾಳಪ್ಪನವರ ತತ್ವ ಪದಗಳ ಮೇಲೆ ಪ್ರವಚನ ಕಾರ್ಯಕ್ರಮವು ಈರಣ್ಣ ಶಾಸ್ತ್ರೀಗಳು ಚಿಕ್ಕರೂಗಿ ಅವರು ನಡೆಸಿಕೊಡುವರು.
ಜ.03 ಬುಧವಾರ ಮುಂಜಾನೆ 9 ಗಂಟೆಗೆ ಜಂಗಮ ಮಹೇಶ್ವರಿ ಅಯ್ಯಾಚಾರ ದಿಕ್ಷೆ ಕಾರ್ಯಕ್ರಮ ಜರುಗುವುದು.ಸಾಯಂಕಾಲ 6 ಗಂಟೆಗೆ ಮಹಾ ಪ್ರಸಾದ (ಖಾಂಡ) ರಾತ್ರಿ 8 ಗಂಟೆಗೆ ಧರ್ಮಸಭೆ ಹಮ್ಮಿಕೊಂಡಿದ್ದು.
ಬೆಳಗಿನವರೆಗೆ ಹಲವಾರು ದೂರದರ್ಶನ ಆಕಾಶವಾಣಿ ಕಲಾವಿದರಿಂದ ಹಾಗೂ ನುರಿತ ಕಲಾವಿದ ಭಜನಾ ಗಾಯಕರಿಂದ ಕಾರ್ಯಕ್ರಮ ಜರುಗುವುದು.
ಜ.04 ಗುರುವಾರ ಬೆಳಿಗ್ಗೆ 7 ಗಂಟೆಗೆ ಮಡಿವಾಳಪ್ಪ ಅವರ ಕರ್ತೃಗದ್ದುಗೆಗೆ ಮಹಾ ರುದ್ರಾಭೀಷೇಕ ಸಹಸ್ರ ಬಿಲ್ಲಾರ್ಚೆನೆ ನಂತರ ಮಡಿವಾಳೇಶ್ವರ ಪಲ್ಲಕ್ಕಿ ಸಮೇತ ವಾದ್ಯವೈಭವದಿಂದ ಅಗ್ನಿ ಪ್ರವೇಶ ಮಾಡಲಾಗುವುದು.ಸಾಯಂಕಾಲ 6 ಗಂಟೆಗೆ ಮಹಾರಥೋತ್ಸವ ಜರಗುವುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪೂಜ್ಯ ಸಿದ್ದರಾಮ ಶಿವಾಚಾರ್ಯರು ಚಿಣಮಗೇರಿ,ಪೂಜ್ಯ ಹವಾಮಲ್ಲಿನಾಥ ಮಹಾರಾಜರು ನೀರಗುಡಿ, ಮುರುಗೇಂದ್ರ ಶಿವಾಚಾರ್ಯರು ಶಿರಶ್ಯಾಡ,ಪೂಜ್ಯ ಚಂದ್ರಶೇಖರ ಶಿವಾಚಾರ್ಯರು ಆಲಮೇಲ, ಶಾಂತವೀರ ಶಿವಾಚಾರ್ಯರು ಗಡಿಗೌಡಗಾಂವ, ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತಮಠ ಯಡ್ರಾಮಿ,ಪೂಜ್ಯ ಚನ್ನಮಲ್ಲ ದೇವರು ಕುಕನೂರ, ಪೂಜ್ಯ ಶಿವಲಿಂಗ ಶರಣರು ಕೈಲಾಸ ಆಶ್ರಮ ಹೋತಪೇಟ,ಪೂಜ್ಯ ಬಲವಂತ ಶರಣರು ಅರಳಗುಂಡಗಿ,ಪೂಜ್ಯ ಚಂದ್ರಶೇಖರ ದೇವರು ಹಿರೇಮಠ ಇಟಗಿ,ಪೂಜ್ಯ ಅಡವಿಲಿಂಗ ಮಹಾರಾಜರು ತಿಂಥಣಿ,ಉದ್ಘಾಟಕರಾಗಿ ಪೂಜ್ಯ ಜ್ಯೋತಿಷ್ಯರತ್ನ ಮಹಾರಾಜರು ತಿಂಥಣಿ ಜಿಲ್ಲೆಯ ಸಂಸದರು ರಾಜ್ಯದ ಶಾಸಕರು ಭಾಗವಹಿಸಲ್ಲಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಡಕೋಳ ಗ್ರಾಮದ ಹಿರಿಯರಾದ ಗೌಡಪ್ಪಗೌಡ ಮಾಲಿಪಾಟೀಲ,ಮಾಜಿ ತಾ.ಪಂ ಸದಸ್ಯ ಸಿದ್ದಣ್ಣ ಕವಲ್ದಾರ, ಮಡಿವಾಳಪ್ಪಗೌಡ ಪೆÇಲೀಸ್ ಬಿರಾದಾರ, ಯಲ್ಲಪ್ಪಗೌಡ ಮಾಲಿ ಪಾಟೀಲ,ಭೀಮಾಶಂಕರ ಜಮಾದಾರ,ಕರೇಪ್ಪಗೌಡ ಪೆÇಲೀಸ್ ಪಾಟೀಲ, ಕಲ್ಲಪ್ಪಗೌಡ ಮಾಲಿ ಪಾಟೀಲ,ಅಮ್ಮಾತ್ಯಪ್ಪ ವಕೀಲರು,ಶಿವರಾಯಗೌಡ ಅಮರೇಶ ಇತರರು ಉಪಸ್ಥಿತರಿದ್ದರು.