ಜ:04ರಂದು ‘ಮರೆಯಲಾಗದ ಮಹನೀಯರು’ ಕೃತಿ ಬಿಡುಗಡೆ

ಮೈಸೂರು:ಜ:02: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಡಾ.ಕೆ.ಎಸ್.ಗೌಡಯ್ಯ ಪ್ರತಿಷ್ಠಾನ ಕೆ.ಆರ್.ನಗರ ಸಂಯುಕ್ತಾಶ್ರಯದಲ್ಲಿ “ಮರೆಯಲಾಗದ ಮಹನೀಯರು’’ ಕಾರ್ಯಕ್ರಮವನ್ನು ಜ.4ರಂದು ಸಾಯಂಕಾಲ 4.30ಕ್ಕೆ ವಿಜಯನಗರದ ಒಂದನೇ ಹಂತದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ ತಿಳಿಸಿದರು.ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮವನ್ನು ವಿಶ್ರಾಂತ ಡಿಜಿಪಿ ಶಂಕರ್ ಬಿದರಿ ಉದ್ಘಾಟಿಸಲಿದ್ದಾರೆ. ಪ್ರಧಾನ ಭಾಷಣವನ್ನು ಡಾ.ಎಂ.ಪಿ.ನಾಡೇಗೌಡರು ಮಾಡಲಿದ್ದಾರೆ. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ವೈ.ಸಿ.ರೇವಣ್ಣ, ಡಾ.ಎಂ.ಸೋಮಶೇಖರ್ ಹಾಗೂ ಹೆಚ್.ಎನ್.ಅಶ್ವತ್ಥ ನಾರಾಯಣ್ ಅಭಿನಂದಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ.ಕೆ.ಎಸ್.ಗೌಡಯ್ಯ ಪ್ರತಿಷ್ಠಾನದ ಅಧ್ಯಕ್ಷ ಜಿ.ಪ್ರಕಾಶ್, ಉಪಾಧ್ಯಕ್ಷ ಬೆನಕ ಪ್ರಸಾದ್, ಕಾರ್ಯದರ್ಶಿ ಡಿಂಡಿಮ ಶಂಕರ್,ಗೌರವಕಾರ್ಯದರ್ಶಿ ಕೆ.ಎಸ್.ನಾಗರಾಜು, ಕೋಶಾಧ್ಯಕ್ಷ ರಾಜಶೇಖರ್ ಕದಂಬ ಉಪಸ್ಥಿತರಿದ್ದರು.