ಜ.9,10 ರಂದು ನಗರದಲ್ಲಿ ಸಂಕ್ರಾಂತಿ ವೈಭವ

ಬಳ್ಳಾರಿ ಡಿ 27 : ನಗರದ ಶ್ರೀ ಮಹಾದೇವ ಎಜುಕೇಶನ್, ಆರ್ಟ್ ಅಂಡ್ ಕಲ್ಚರಲ್ ಟ್ರಸ್ಟ್‍ನಿಂದ ಸಂಕ್ರಾಂತಿ ಹಬ್ಬದ ಅಂಗವಾಗಿ, ಕಲೆ ಮತ್ತು ಕಲಾವಿದರನ್ನು ಪೆÇ್ರೀತ್ಸಾಹಿಸುವುದಕ್ಕಾಗಿ ಎರಡು ದಿನಗಳ ಸಂಕ್ರಾಂತಿ ವೈಭವ'' ಕಾರ್ಯಕ್ರಮವನ್ನು ಜ 9 ಮತ್ತು 10 ನಗರದ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಚಿತ್ರಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶನಕ್ಕಾಗಿಚಿತ್ರಸಂತೆ”ಯಲ್ಲಿ ಪಾಲ್ಗೊಳ್ಳಲಿದ್ದಾರೆ, ಕವಿ, ಸಾಹಿತಿಗಳು “ಕವಿಗೋಷ್ಠಿ” ಕಾರ್ಯಕ್ರಮದಲ್ಲಿ ಕವಿ-ಕುಂಚ-ಗಾಯನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಸಾರ್ವಜನಿಕರಿಗಾಗಿ ರಂಗೋಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ನೃತ್ಯ ಸ್ಪರ್ಧೆ, ಗಾಯನ ಸ್ಪರ್ಧೆ, ಬೆಂಕಿ ಇಲ್ಲದ ಆಹಾರ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಜೇತರಿಗೆ ಪ್ರಶಸ್ತಿಗಳು, ಸಾಧಕರಿಗೆ ಸನ್ಮಾನಗಳನ್ನು ಆಯೋಜಿಸಿದೆ. ಆಸಕ್ತ ಕಲಾವಿದರು, ಕವಿಗಳು ಹೆಚ್ಚಿನ ಮಾಹಿತಿಗಾಗಿ 9880299912 / 8660907688 / 9480823437 ಈ ನಂಬರ್ ಗೆ ಸಂಪರ್ಕಿಸಬಹುದು ಎಂದು ಟ್ರಸ್ಟ್‍ನ ಅಧ್ಯಕ್ಷ ಬಸವರಾಜ್ ಬಿಸಿಲಹಳ್ಳಿಯವರು ತಿಳಿಸಿದ್ದಾರೆ.