ಜ.9 ಕ್ಕೆ ಚಿತ್ರಗೀತೆಗಳ ಗಾಯನ

ಹುಬ್ಬಳ್ಳಿ. ಜ.7; ನಗರದ ಕಲಾವೇದಿಕೆ ವತಿಯಿಂದ ವಿವೇಕಾನಂದ ಕಾಲನಿಯ ಭವಾನಿನಗರದ ರೋಟರಿ ಕಿವುಡ ಮತ್ತು ಮೂಕ ಮಕ್ಕಳ ಶಾಲಾ ಕಾಂಪೌಂಡ್ ಆವರಣದಲ್ಲಿ ಜ.9  ರಂದು ಸಂಜೆ 4 ಕ್ಕೆ ಖ್ಯಾತ ಗಾಯಕ ಯೇಸುದಾಸ್ ಹಾಗೂ ಹಿರಿಯ ನಟ ಶ್ರೀನಾಥ್ ಜನ್ಮದಿನದ ಅಂಗವಾಗಿ ಚಿತ್ರಗೀತೆಗಳ ಗಾಯನ ನಾದಲೋಕ ಹಮ್ಮಿಕೊಳ್ಳಲಾಗಿದೆ.ನಗರ ಯೋಜನೆ ಸಹಾಯಕ ನಿರ್ದೇಶಕ ಬಸವರಾಜ್ ಕೆ ಲಮಾಣಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ನಾದಲೋಕ ಕಲಾವೇದಿಕೆ ಅಧ್ಯಕ್ಷ ಆರ್.ಎಂ ಗೋಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೊಲೀಸ್ ಇನ್ಸ್ ಪೆಕ್ಟರ್ ಡಿ.ಬಿ ರವಿಚಂದ್ರ,ಖ್ಯಾತ ವೈದ್ಯರಾದ ಡಾ.ವೀಣಾ ಕಾರಟಗಿ,ಜಯಾ ಪಿ ಪಟ್ಟಣಶೆಟ್ಟಿ,ಡಾ.ಸಹನಾ ಭಟ್,ದಾಕ್ಷಾಯಿಣಿ ಕೋಳಿವಾಡ,ಸ್ಟಿಫನ್ ಲುಂಜಾಳ,ಸಿ.ಕೆ ಮಾಲಿಪಾಟೀಲ್ ಆಗಮಿಸಲಿದ್ದಾರೆ