ಜ.8 ಭಾರತ-ಬ್ರಿಟನ್ ನಡುವೆ ವಿಮಾನ ಸಂಚಾರ ಪುನಾರಂಭ

ನವದೆಹಲಿ, ಜ.1-ಈ ತಿಂಗಳ ಎಂಟರಿಂದ ಭಾರತ ಮತ್ತು ಬ್ರಿಟನ್ ನಡುವೆ ವಿಮಾನ ಸಂಚಾರ ಪುನಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಕೇಂದ್ರ ನಾಗರಿಕ‌ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ರೂಪಾಂತರಿ ಕೊರೊನಾ ಸೋಂಕು ಹೆಚ್ಚಳವಾಗುವ ಭೀತಿಯ‌‌‌ ಹಿನ್ನೆಲೆಯಲ್ಲಿ ಭಾರತ-ಬ್ರಿಟನ್ ನಡುವಣ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ
ರದ್ದುಪಡಿಸಲಾಗಿತ್ತು.ಈ ಕುರಿತು ಟ್ವೀಟ್ ಮಾಡಿರುವ ಅವರು, ತಾತ್ಕಾಲಿಕವಾಗಿ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ಜ.8ರಿಂದ ಸೀಮಿತ ರೀತಿಯಲ್ಲಿ ವಿಮಾನ ಸಂಚಾರ ಆರಂಭಿಸುವುದಾಗಿ ಹೇಳಿದ್ದಾರೆ.
ಜನವರಿ 23ರ ವರೆಗೆ ಕಾರ್ಯಾಚರಣೆಯನ್ನು ವಾರಕ್ಕೆ 15 ವಿಮಾನಯಾನಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು
ಅವರು ಮಾಹಿತಿ ನೀಡಿದ್ದಾರೆ.