ಜ.8: ದೇಶಾದ್ಯಂತ 3ನೇ ಲಸಿಕೆ ತಾಲೀಮು

ನವದೆಹಲಿ, ಜ.6- ಈಗಾಗಲೇ ಎರಡು ಹಂತದಲ್ಲಿ ಕೊರೋನೋ ಸೊ‌ಂಕಿನ ಲಸಿಕೆ ತಾಲೀಮು ನಡೆಸಿರುವ ಕೇಂದ್ರ‌ ಸರ್ಕಾರ ಜನವರಿ 8 ರಂದು ಮೂರನೇ ಹಂತದ ಲಸಿಕೆ ವಿತರಣೆ ತಾಲೀಮು ಹಮ್ಮಿಕೊಂಡಿದೆ.

ಈ ಬಾರಿ ದೇಶಾದ್ಯಂತ ಡ್ರೈ ರನ್ ಲಸಿಕಾ ಅಭಿಯಾನ ಹಮ್ಮಿಕೊಂಡಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಲಸಿಕೆ ತಾಲೀಮು ಕಾರ್ಯದಲ್ಲಿ ಎದುರಾಗುವ ಲೋಪ ದೋಷ ಪತ್ತೆ ಮಾಡಿ ಲಸಿಕೆ ಹಾಕುವಾಗ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ.

ಲಸಿಕೆ ವಿತರಣೆ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಲಸಿಕೆಗೆ ವಿತರಣೆಗೆ ಪೂರ್ವ ತಾಲೀಮು ನಡೆಸುವಂತೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ.

ಭಾರತೀಯ ಔಷಧ ನಿಯಂತ್ರಕ – ಡಿಸಿಜಿಐ ದೇಶದಲ್ಲಿ ಕೋವಾಕ್ಸಿನ್ ಮತ್ತು ಕೋವಿ ಶೀಲ್ಡ್ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಿದೆ.

ಜನವರಿ 13 ರಿಂದ ದೇಶಾದ್ಯಂತ ಲಸಿಕೆ ವಿತರಣೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಲೋಪ ದೋಷ ಪತ್ತೆ ಮಾಡಲು ‌ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಮೊದಲ ಹಂತದಲ್ಲಿ ನಾಲ್ಕು ರಾಜ್ಯ ಮತ್ತು ಎರಡನೇ ಹಂತದಲ್ಲಿ ಹಲವು ರಾಜ್ಯದಲ್ಲಿ ಲಸಿಕೆ ತಾಲೀಮು ಕೈಗೊಳ್ಳಲಾಗಿತ್ತು. ಎರಡೂ ಹಂತದಲ್ಲಿ ಇಂಟರ್ನೆಟ್ ಸಮಸ್ಯೆ ಸೇರಿದಂತೆ ಕೆಲ ಸಮಸ್ಯೆ ಪತ್ತೆ ಮಾಡಲಾಗಿದ್ದು ಲಸಿಕೆ ವಿತರಣೆ ಸಮಯದಲ್ಲಿ ಇವುಗಳ ಸಮಸ್ಯೆ ಎದುರಾಗದಂತಡ ಜಾಗೃತೆ ವಹಿಸಲಿ ನಿರ್ಧರಿಸಲಾಗಿದೆ.