ಜ. 8 ಅವರೆಕಾಯಿ ಮೇಳ

ಬೆಂಗಳೂರು, ಜ.೬- ಪ್ರತಿವರ್ಷದಂತೆ ಈ ವರ್ಷವೂ ಜನವರಿ ೮ ರಿಂದ ೧೭ರ ತನಕ ನಗರದಲ್ಲಿ ಅವರೆಕಾಯಿ ಮೇಳ ನಡೆಯಲಿದೆ.
ವಾಸವಿ ಕಾಂಡಿಮೆಂಟ್ಸ್ ಆಯೋಜಿಸುತ್ತಿರುವ ಈ ಅವರೆಕಾಯಿ ಮೇಳದಲ್ಲಿ ಅವರೆಕಾಳಿನಿಂದ ತಯಾರಿಸಿದ ವಿವಿಧ ಬಗೆಯ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ನಡೆಯಲಿದೆ.
ಈ ಬಾರಿ ಕೊರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಅವರೆಕಾಯಿ ಮೇಳವನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಮೇಳವು ಬೆಳಗ್ಗೆ ೧೦ ಗಂಟೆಯಿಂದ ಆರಂಭವಾಗಲಿದೆ.
ಕಳೆದ ೨೦ ವರ್ಷಗಳಿಂದ ಅವರೆಕಾಯಿ ಮೇಳ ಆಯೋಜಿಸುತ್ತಾ ಬರಲಾಗುತ್ತಿದೆ.ಕೋವಿಡ್ ಕಾರಣದಿಂದಾಗಿ ಮೇಳ ನಿಲ್ಲಿಸಿದರೆ ಅವರೆಕಾಯಿ ಬೆಳೆಯುವ ರೈತರಿಗೆ ತೊಂದರೆಯಾಗಬಹುದು ಎನ್ನುವ ಕಾರಣಕ್ಕಾಗಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಆಯೋಜಕಿ ಗೀತಾ ಶಿವಕುಮಾರ್ ತಿಳಿಸಿದ್ದಾರೆ.
ಕೊರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಈ ಬಾರಿ ಅವರೇಕಾಯಿ ಮೇಳದಲ್ಲಿ ವಿವಿಧ ಖಾದ್ಯಗಳು ಮತ್ತು ಉತ್ಪನ್ನಗಳನ್ನು ಖರೀದಿ ಮಾಡುವ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರೈತರು ಬೆಳೆದ ಅವರೆಕಾಯಿಯನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶವನ್ನು ಹೊಂದಲಾಗಿದೆ ಹೀಗಾಗಿ ಕಳೆದ ೨೦ ವರ್ಷಗಳಿಂದ ಈ ಮೇಳ ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.