ಜ.8ಕ್ಕೆ ಕೆಜಿಎಫ್ -2 ಟೀಸರ್ ಬಿಡುಗಡೆ

ದಾವಣಗೆರೆ. ಜ.೭;  ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದಿಂದ ಜ.8 ರಂದು ಬೆಳಗ್ಗೆ 10 ಕ್ಕೆ ನಗರದ ರೋಟರಿ ಬಾಲಭವನದಲ್ಲಿನಟ ಯಶ್ ಜನ್ಮದಿನ ಪ್ರಯುಕ್ತ ಕೆಜಿಎಫ್ -2 ಟೀಸರ್ ಬಿಡುಗಡೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಎಸ್.ಸಂತೋಷ್ ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಟೀಸರ್ ಬಿಡುಗಡೆ ನಂತರ ಯಶ್ ಜನ್ಮದಿನ ಪ್ರಯುಕ್ತ ನಗರದ ಬಾಡಾ ಕ್ರಾಸ್ ಬಳಿಯಿರುವ ಪುಟ್ಟರಾಜ ಗವಾಯಿಗಳ ಪುಣ್ಯಾಶ್ರಮದ ಅಂಧ ಮಕ್ಕಳಿಗೆ ಅನ್ನಸಂತಪರ್ಣೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೇಯರ್ ಬಿ.ಜೆ ಅಜಯ್ ಕುಮಾರ್,ಪಾಲಿಕೆ ಸದಸ್ಯರಾದ ಜೆ.ಎನ್ ಶ್ರೀನಿವಾಸ್, ಹೆಚ್.ಸಿ ಜಯ,ಶಿವನಗೌಡ ಪಾಟೀಲ್, ಸಂತೋಷ್ ಕುಮಾರ್,ಜಯ ಕರ್ನಾಟಕ ಜಿಲ್ಲಾಧ್ಯಕ್ಷರಾದ ನಿಖಿಲ್,ಶ್ರೀನಿವಾಸ ದಾಸಕರಿಯಪ್ಪ,ಶ್ರೀಕಾಂತ್ ನೀಲಗುಂದ,ಪರಶುರಾಮ ನಂದಿಗಾವಿ ಆಗಮಿಸಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ನರೇಶ್,ಅಭಿಷೇಕ್,ರೇವಣಗೌಡ ಪಾಟೀಲ್ ಇದ್ದರು.