ಜ.7 ರಂದು ಕಬಡ್ಡಿ ಆಯ್ಕೆ ಪ್ರಕ್ರಿಯೆ

ಹಿರಿಯೂರು.ಜ: 5- ಜನವರಿ 16ರಿಂದ 18ರ ವರೆಗೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ, ಕರ್ನಾಟಕ ರಾಜ್ಯಮಟ್ಟದ ಪುರುಷರ ಮತ್ತು ಮಹಿಳೆಯರ ಕಬಡ್ಡಿ ಚಾಂಪಿಯನ್ ಶಿಪ್ ನಡೆಯಲಿದ್ದು,ಈ ಪಂದ್ಯಾವಳಿಗೆ ಚಿತ್ರದುರ್ಗ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನ ಪುರುಷರ  ಹಾಗೂ ಮಹಿಳೆಯರ ಕಬಡ್ಡಿ ತಂಡ ಕಳುಹಿಸುವ ಸಲುವಾಗಿ ಜನವರಿ 7ರ ಮಧ್ಯಾಹ್ನ,3, ಘಂಟೆಗೆ ಕಬಡ್ಡಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಚಿತ್ರದುರ್ಗ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ತಿಪ್ಪೇಸ್ವಾಮಿ ಎಂ ಪಿ ಯವರು ಪತ್ರಿಕೆಗೆ ತಿಳಿಸಿದ್ದಾರೆ.ಈ ಆಯ್ಕೆ ಗೆ ಬರುವ ಕ್ರೀಡಾ ಪಟುಗಳು ಪುರುಷರ ದೇಹದ ತೂಕ 85,ಕೇಜಿ ಒಳಗಿರಬೇಕು,ಮಹಿಳೆಯರ ದೇಹ ತೂಕ,75,ಕೇಜಿ ಒಳಗಿರಬೇಕು, ಆಯ್ಕೆ ಟ್ರಯಲ್ಸ್ ಗೆ ಬರುವಾಗ ನಿಮ್ಮ ಸಂಘ ಸಂಸ್ಥೆಗಳ ,ಹಾಗೂ ಕಾಲೇಜುಗಳ,ಅನುಮತಿ ಪತ್ರ ಕಡ್ಡಾಯವಾಗಿ,ತರಬೇಕು, ಆಯ್ಕೆ ಪ್ರಕ್ರಿಯೆ  ಹಿರಿಯೂರಿನ ನೆಹರು ಮೈದಾನದಲ್ಲಿ ನಡೆಯಲಿದೆ.ಹೆಚ್ಚಿನ ವಿವರಗಳಿಗೆ, ಕಾರ್ಯದರ್ಶಿ, ತಿಪ್ಪೇಸ್ವಾಮಿ ಎಂ ಪಿ, ಚಿತ್ರದುರ್ಗ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ರಿ ಹಿರಿಯೂರು, ಮೊಬೈಲ್ ಸಂಖ್ಯೆ,9741005518,