ಜ. 7ರಂದು ಸಾವಿತ್ರಿಬಾಯಿ ಫುಲೆ ಜಯಂತಿ-47 ಸಾಧಕರಿಗೆ ಪ್ರಶಸ್ತಿ ಪ್ರಧಾನ

ಆಳಂದ:ಜ.5: ಪಟ್ಟಣದ ಗುರುಭವನದಲ್ಲಿ ಜ. 7ರಂದು ಬೆಳಗಿನ 11:45ಕ್ಕೆ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಸರ್ಕಾರಿ ಮತ್ತು ಅನುದಾನಿತ ಶಿಕ್ಷಕಿಯರ ತಾಲೂಕು ಸಂಘದ ಆಶ್ರಯದಲ್ಲಿ ಮಾತೆ ಸಾವಿತ್ರಿಬಾಯಿ ಫುಲೆಯವರ 192ನೇ ಜನ್ಮದಿನಾಚರಣೆ ಅಂಗವಾಗಿ ಮಾತೆ ಸಾವಿತ್ರಿಬಾಯಿ ಫುಲೆ ಮತ್ತು ಜೋತಿಬಾ ಫುಲೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಈ ಕುರಿತು ಪಟ್ಟಣದ ರಾಜ್ಯ ಸರ್ಕಾರಿ ನೌಕರ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಶೈಲಜಾ ಪೋಮಾಜಿ ಅವರು ವಿವರಿಸಿದರು.

ರಚನೆ ಮಾಡಿದ ಸಮಿತಿಯ ಆಯ್ಕೆ ಮಾಡಿದ ವಿವಿಧ ಕ್ಷೇತ್ರಗಳ 47 ಮಂದಿಗೆ ಪ್ರಶಸ್ತಿ ಪ್ರದಾನ ಕೈಗೊಂಡು ಸನ್ಮಾನಿಸಲಾಗುವುದು. ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕ, ಶಿಕ್ಷಕಿಯರು ಸೇರಿ 25 ಮಂದಿ, ಪ್ರೌಢಶಾಲಾ ವಿಭಾಗದಿಂದ ತಲಾ ಐವರು, ಅಲ್ಲದೆ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಶಿಕ್ಷಕರು ಮತ್ತು ಅಂಗನವಾಡಿ, ಬಿಸಿಯೂಟ, ಎಸ್‍ಡಿಎಂಸಿ ಅಧ್ಯಕ್ಷರು ಒಬ್ಬರು, ಕ್ರೀಡಾ ಸಾಧಕ ಮಕ್ಕಳಿಗೆ ಮತ್ತು ನಿವೃತ್ತ ಅಂಚಿನಲ್ಲಿರುವ ಐವರು ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಮಾದನಹಿಪ್ಪರಗಾ ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ಖಜೂರಿ ಕೋರಣೇಶ್ವರ ಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು, ಆಳಂದ ಸಂಸ್ಥಾನ ಹಿರೇಮಠದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ವಹಿಸಲಿದ್ದಾರೆ.

ಕಾರ್ಯಕ್ರಮ ಶಾಸಕ ಸುಭಾಷ ಗುತ್ತೇದಾರ ಉದ್ಘಾಟಿಸುವರು. ಗ್ರಾಮೀಣ ಶಾಸಕ ಬಸವರಾಜ ಬಿ. ಮತ್ತಿಮೂಡ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು. ಸಂಘದ ಅಧ್ಯಕ್ಷೆ ಶೈಲಜಾ ಪೋಮಾಜಿ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ನಿರಗುಡಿ ಶಿಕ್ಷಕ ಜೀತೆಂದ್ರ ತಳವಾರ ಉಪನ್ಯಾಸ ನೀಡುವರು, ಮುಖ್ಯ ಅತಿಥಿಗಳಾಗಿ ತಹಸೀಲ್ದಾರ ಯಲ್ಲಪ್ಪ ಸುಬೇದಾರ, ತಾಪಂ ಇಒ ವಿಲಾಸರಾಜ ಪ್ರಸನ್ನ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚನಾಳ, ಪುರಸಭೆ ಅಧ್ಯಕ್ಷೆ ರಾಜಶ್ರೀ ಎಸ್. ಖಜೂರಿ, ಉಪಾಧ್ಯಕ್ಷ ಈರಣ್ಣಾ ಹತ್ತರಕಿ, ಸಮಾಜ ಕಲ್ಯಾಣಾಧಿಕಾರಿ ಮೋನಮ್ಮ ಸುತಾರ, ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಲೆಂಗಟಿ, ಕಾರ್ಯದರ್ಶಿ ಸಿದ್ಧಲಿಂಗಯ್ಯಾ ಸ್ವಾಮಿ, ನೌಕರ ಗೃಹ ಮಂಡಳಿ ಅಧ್ಯಕ್ಷ ನಾಗಪ್ಪ ಹೊನ್ನಳಿ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ ಹೂಗಾರ, ಪ್ರಾಥಮಿಕ ಅಧ್ಯಕ್ಷ ಮಲ್ಲಯ್ಯಾ ಗುತ್ತೇದಾರ, ಪ್ರ.ಕಾರ್ಯದರ್ಶಿ ಬಾಬು ಎ.ಮೌರ್ಯ ರಾಜ್ಯ ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಸಿದ್ಧರಾಮ ಪಾಟೀಲ, ಕಾರ್ಯದರ್ಶಿ ಲೋಕಪ್ಪ ಜಾಧವ, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿನಾಥ ಖಜೂರಿ, ಪ್ರ.ಕಾ. ವಿನೋದ ಕುಲಕರ್ಣಿ, ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ, ಕಾರ್ಯದರ್ಶಿ ಮನ್ಸೂರಸಾಬ ಮುಜಾವರ ಸೇರಿದಂತೆ ಮತ್ತಿತರು ಆಗಮಿಸಲಿದ್ದಾರೆ ಎಂದರು.

ವಿಶೇಷ ಸನ್ಮಾನಿತರಾಗಿ ಅಕ್ಷರಸಿರಿ ರಾಜ್ಯ ಪ್ರಶಸ್ತಿ ಪುರಸ್ಕøತೆ ನೀಲಾವತಿ ಬಿ. ಪಾಟೀಲ, ಪ್ರಾಚಾರ್ಯೆ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ, ಕೃಷಿ ರತ್ನ ಪುರಸ್ಕøತೆ ಅನುಲಾಬಾಯಿ ಎಸ್. ಹಿರೇಮಠ ಆಗಮಿಸುವರು. ಈ

ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗಳ ಶಿಕ್ಷಕ, ಶಿಕ್ಷಕಿಯರು ಪಾಲಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿದ್ಧರಾಮ ಪಾಟೀಲ, ಕಾರ್ಯದರ್ಶಿ ಲೋಕೇಶ ಜಾಧವ, ಶಿಕ್ಷಕ ದತ್ತಪ್ಪ ಸೇರಿದಂತೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯ ಸಂಘದ ಕಾರ್ಯದರ್ಶಿ ಜಯಶ್ರೀ ನಾಗಶೆಟ್ಟಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.