ಜ.7ರಂದು ದ್ವಿತೀಯ ರಾಜ್ಯ ಮಟ್ಟದ ಬೃಹತ್ ವಧು-ವರರ ಸಮಾವೇಶ

ಬೀದರ್: ಡಿ.23:ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡದವರಿಗಾಗಿ ಕಲಬುರ್ಗಿ ನಗರದ ಸಾರ್ವಜನಿಕ ಉದ್ಯಾನವನದ ಹತ್ತಿರವಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ 2024ರ ಜನೆವರಿ 7ರಂದು ರವಿವಾರ ಮುಂಜಾನೆ 10-00 ರಿಂದ ಸಂಜೆ 6-00 ಗಂಟೆ ವರೆಗೆ ರಾಜ್ಯ ಮಟ್ಟದ ದ್ವಿತೀಯ ಬೃಹತ್ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶದ ಮುಖ್ಯ ಸಂಯೋಜಕರು ಹಾಗೂ ನ್ಯಾಯವಾದಿ ಕಕ್ಕೇರಿ ಚಂದ್ರಶೇಖರ ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಡಿ ಉದ್ದೇಶಿಸಿ ಮಾತನಾಡಿರುವ ಅವರು, ಈ ಸಮಾವೇಶದಲ್ಲಿ ಲಿಂಗಾಯತ ಒಳ ಪಂಗಡಗಳಾದ ಜಂಗಮ, ಪಂಚಮಸಾಲಿ, ದೀಕ್ಷೆ, ಆದಿ ಬಣಜಿಗ, ಬಣಗಾರ, ರೆಡ್ಡಿ ಮತ್ತು ಒಳಪಂಗಡ, ಶಿವಸಿಂಪಿಗ, ನೇಕಾರ, ಕುಂಬಾರ, ಹಠಗಾರ, ಮಾಲಗಾರ, ಗಾಣಿಗರು, ಸಜ್ಜನ ಗಾಣಿಗ, ಕುರಿಕುಲ ಗಾಣಿಗ, ಕುರುವಿನ ಶೆಟ್ಟಿ, ಹೂಗಾರ, ಕುಡ್ಡ ಒಕ್ಕಲಿಗ ಮತ್ತಿತರ ಒಳ ಪಂಗಡಗಳ ಸಮಾಜ ಬಾಂಧವರು ವಧು-ವರರ ಸಮಾವೇಶದಲ್ಲಿ ಭಾಗವಹಿಸಬಹುದಾಗಿದೆ. ಕರ್ನಾಟಕ ಅದರಲ್ಲಿಯೂ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಎಲ್ಲಾ ವರ್ಗದ ಸಮಾಜ ಬಾಂಧವರು, ವಿಶೇಷವಾಗಿ ಡಾಕ್ಟರ್, ಇಂಜಿನೀಯರ್, ಸರಕಾರಿ, ಅರೆ-ಸರಕಾರಿ ನೌಕರಸ್ಥರು, ವ್ಯಾಪಾರಸ್ಥರು, ರೈತ ಕುಟುಂಬ ವರ್ಗದ ವಧು-ವರರು ಈ ಸಮಾವೇಶದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಮುಖ್ಯವಾಗಿ ಮರು ಮದುವೆ ಹಾಗೂ ವಿಳಂಬ ಮದುವೆ ಬಯಸುವವರರು ಸಮಾವೇಶದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬಹುದು ಎಂದವರು ಹೇಳಿದರು.
ಜನೆವರಿ 8 2023ರಂದು ಪ್ರಥಮ ಸಮಾವೇಶ ಹಮ್ನಿಕೊಂಡಿದ್ದು, ಅದು ಇಡೀ ಕಲ್ಯಾಣ ಕರ್ನಾಟಕದ ಜನರಿಗೆ ತುಂಬ ಅನುಕುಲ ಆಗಿದೆ. ಬೀದರ್ ಜಿಲ್ಲೆಯಿದ ಸುಮಾರು 100 ಜನ ನೊಂದಸಣಿ ಮಾಡಿದ್ದರು. ಈ ವರ್ಷವೂ ಸಹ ಅನುಕುಲ ಆಗಲಿ ಎಂಬ ಕಾರಣಕ್ಕೆ ಈ ಬೃಹತ್ ಸಮಾವೇಶ ಆಯೋಜಿಸಲಾಗುತ್ತಿದೆ ಎಂದರು.
ಈ ಸಮಾವೇಶದ ಉದ್ಘಾಟನೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ ಅವರು ನೆರವೇರಿಸಲಿದ್ದು, ಕಲಬುರಗಿ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ ಅಧ್ಯಕ್ಷತೆ ವಹಿಸುವರು. ಸಂಚಾಲಕರು ಹಾಗೂ ಸಂಯೋಜಕರಾಗಿ ನಾಗಯ್ಯ ಮಠ ಹಾಗೂ ನಿಜಲಿಂಗ ಚಂದ್ರಕಂಠಿ ಕಾರ್ಯನಿರ್ವಹಿಸುವರು.
ಸಮಾವೇಶದಲ್ಲಿ ಭಾಗವಹಿಸುವವರಿಗೆ ಸೂಚನೆ:- 1) ಸಮಾವೇಶದಲ್ಲಿ ಕಡ್ಡಾಯವಾಗಿ ವಧು-ವರರು ಹಾಜರ ಇರಬೇಕು. – 2) ವಧು ಅಥವಾ ವರರ ಜೊತೆಗೆ ಇಬ್ಬರಿಗೆ ಮಾತ್ರ ಅವಕಾಶ ಇರುತ್ತದೆ. 3) ವಧು-ವರರು ಬರುವಾಗ ಸಂಪೂರ್ಣ ಬಯೋಡೆಟಾ ಮತ್ತು 486 (ಪೆÇೀಸ್ಟ್ ಕಾರ್ಡ) ಅಳತೆಯ ಫೆÇೀಟೊ ತರಬೇಕು. 4) ಮುಂಚಿತವಾಗಿ ನೋಂದಣಿ ಮಾಡಿಸುವವರು ಮೇಲಿನ ಸಂಯೋಜಕರ ಮುಖಾಂತರ ದಿನಾಂಕ 01-01-2024 ರ ರೊಳಗಾಗಿ ನೊಂದಣಿ ಮಾಡಿಸತಕ್ಕದ್ದು. 5) ಪ್ರದೇಶ ಫೀ 1000/- ರೂ. ಗಳಿರುತ್ತದೆ. ನೋಂದಣಿ ಮತ್ತು ಪಾಸ್ ಇಲ್ಲದೇ ಒಳಗೆ ಪ್ರವೇಶವಿಲ್ಲ. 6) ಪ್ರಸಾದದ ವ್ಯವಸ್ಥೆ ಇರುತ್ತದೆ. – 7) ಸಮಾವೇಶದ ದಿನವೂ ಕೂಡ ನೋಂದಣಿಗೆ ಅವಕಾಶ ಮಾಡಿಕೊಡಲಾಗುವುದು. ಎಲ್ಲಾ ಸಮಾಜ ಬಾಂಧವರು ಈ ಬೃಹತ್ ಸಮಾವೇಶದ ಸದುಪಯೋಗ ಪಡೆದುಕೊಳ್ಳಬೇಕೆಂದು ಕಕ್ಕೇರಿ ಚಂದ್ರಶೇಖರ ತಿಳಿಸಿದರು.
ಶರಣ ಸಿದ್ರಾಮಪ್ಪ ಕಪಲಾಪುರೆ ಮಾತನಾಡಿ, ದಾಂಪತ್ಯೆ ಜೀವನದ ಮುಖ್ಯ ಸಂಸ್ಕಾರವೇ ವಿವಾº. ಇದು ಅತ್ಯಂತ ಪವಿತ್ರವಾಗಿದ್ದರೆ ಆ ಜೋಡಿಗಳು ನೂರು ವರ್ಷ ಸುಖವಾಗಿ ಬಾಲಲು ಸಾಧ್ಯವಿದೆ. ಎರಡು ದೇಹಗಳನ್ನು ಒಂದುಗೂಡಿಸುವ ಕಾರ್ಯ ವಿವಾಹ ಕಲ್ಯಾಣದಿಂದ ಸಾಧ್ಯ. ಹಾಗಾಗಿ ಈ ಪವಿತ್ರ ಸಮಾವೇಶದಲ್ಲಿ ವಧು-ವರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಮಾವೇಶದ ಸದುಪಯೋಗಪಡೆದುಕೊಳ್ಳಬೇಕೆಂದು ಕೋರಿದರು.
ಕಲ್ಯಾಣರಾವ ಯಲಮಡಗಿ, ವಿರೇಶ ಶ್ರೀ ಗಂಧದಮಠ, ಧನರಾಜ ಮೀನಕೇರಾ, ಗುರುಪಾದಪ್ಪ ಪಲ್ಲಕಿ, ಸಂಜುಕುಮಾರ ಕಪಲಾಪುರ ಹಾಗೂ ಇತರರು ಪತ್ರಿಕಾ ಗೋಷ್ಟಿಯಲ್ಲಿದ್ದರು.