ಜ.6, 7 ರಂದು ಬಾದಾಮಿ ಚಾಲುಕ್ಯ ಉತ್ಸವ

ಬಾದಾಮಿ,ಡಿ 26: ಕಮತಗಿಯ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ(ರಿ)ದ ವತಿಯಿಂದ ಬರುವ 2024ರ ಜನೇವರಿ 6 ಮತ್ತು 7 ರಂದು ಎರಡು ದಿನಗಳ ಕಾಲ ನಗರದ ಎಸ್.ಎಫ್.ಹೊಸಗೌಡ್ರ ವಲ್ರ್ಡ ಸ್ಕೂಲ್ ನಲ್ಲಿ ಬಾದಾಮಿ ಚಾಲುಕ್ಯ ಉತ್ಸವ-2024'' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಎಂ.ರಮೇಶ ಕಮತಗಿ ತಿಳಿಸಿದರು. ಪಟ್ಟಣದ ಕಾನಿಪ ಭವನದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಜ.6 ರಂದು ಮೊದಲ ದಿನದ ಕಾರ್ಯಕ್ರಮ ಅಂದು ಬೆಳಿಗ್ಗೆ 9 ಗಂಟೆಗೆ ಮೆರವಣಿಗೆಗೆ ಪಿ.ಎಸ್.ಐ.ನಿಂಗಪ್ಪ ಪೂಜಾರಿ ಚಾಲನೆ ನೀಡಲಿದ್ದು, ಮೆರವಣಿಗೆಯು ಬಸವೇಶ್ವರ ವೃತ್ತದಿಂದ ಪ್ರಾರಂಭವಾಗಿ ಮುಖ್ಯರಸ್ತೆಯ ಮೂಲಕ ಎಸ್.ಎಫ್.ಹೊಸಗೌಡ್ರ ಸ್ಕೂಲ್ ತಲುಪಲಿದೆ. ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ತಾಲೂಕಾ ಕಸಾಪ ಅಧ್ಯಕ್ಷ ಬಿ.ಎಫ್.ಹೊರಕೇರಿ ಧ್ವಜಾರೋಹಣ ನೆರವೇರಿಸುವರು. ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಜಾನಪದ ವಿದ್ವಾಂಸ ಶ್ರೀರಾಮ ಇಟ್ಟನ್ನವರ ಉದ್ಘಾಟಿಸುವರು. ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧ್ಯಕ್ಷತೆ ವಹಿಸುವರು. ಬಾಗಲಕೋಟೆ ಜಿಲ್ಲೆಗೆ 25 ವರ್ಷ ತುಂಬಿದ ಸವಿನೆನಪಿಗಾಗಿ 25 ಕೃತಿಗಳ ಲೋಕಾರ್ಪನೆ ನಡೆಯಲಿದ್ದು, ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ 25 ಕೃತಿಗಳ ಲೋಕಾರ್ಪಣೆ ಮಾಡುವರು. ಮಧ್ಯಾಹ್ನ 1.30 ಗಂಟೆಗೆಬಾದಾಮಿ ಚಾಲುಕ್ಯರ ಕಲೆ ಮತ್ತು ಸಂಸ್ಕøತಿ” ಮತ್ತು ರೈತ ಸಂಸ್ಕøತಿ'' ವಿಚಾರಗೋಷ್ಠಿ ನಡೆಯಲಿದೆ. ಸಾಯಂಕಾಲ 4 ಗಂಟೆಗೆಮಹಿಳಾ ಕವಿಗೋಷ್ಠಿ” ಮತ್ತು “ವಚನ ಗೋಷ್ಠಿ” ನಡೆಯಲಿದೆ. ಸಂಜೆ 5 ಗಂಟೆಯಿಂದ ಗಾಯನ ಸುಧೆ, ಸಂಗೀತ ತಂಡ, ನಾಟಕ ಪ್ರದರ್ಶನ, ಕಲಾ ಪ್ರದರ್ಶನ, ಭಜನಾ ಕಾರ್ಯಕ್ರಮ ಹೀಗೆ ವಿವಿದ ಸಾಂಸ್ಕøತಿಕ ಕಲಾ ತಂಡಗಳಿಂದ ವಿವಿದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಲಿವೆ.

ಜ.7 ರಂದು ನಡೆಯುವ ಎರಡನೇ ದಿನದ ಕಾರ್ಯಕ್ರಮದಲ್ಲಿ ಬೆಳಿಗ್ಗೆ 11 ಗಂಟೆಗೆ ಮಕ್ಕಳ ಗೋಷ್ಠಿ, ಪ್ರಧಾನ ಕವಿಗೋಷ್ಠಿ ನಂತರ ಮಧ್ಯಾಹ್ನ 2 ಗಂಟೆಗೆ ಯುವ ಕವಿಗೋಷ್ಠಿ ಮತ್ತು ಗಜಲ್ ಗೋಷ್ಠಿ ನಡೆಯಲಿದೆ. ಸಂಜೆ 4 ಗಂಟೆಗೆ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭ ಜರುಗಲಿದೆ. ಇದೇ ಸಂದರ್ಭದಲ್ಲಿ 75 ಜನ ಸಾಧಕರಿಗೆ ಚಾಲುಕ್ಯ ರತ್ನ ಇಮ್ಮಡಿ ಪುಲಿಕೇಶಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಚಾಲುಕ್ಯ ಉತ್ಸವದ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆಗೊಳಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ತಾಲೂಕಾ ಕಸಾಪ ಅಧ್ಯಕ್ಷ ಬಿ.ಎಫ್.ಹೊರಕೇರಿ, ತಾಲೂಕಾ ಕಜಾಪ ಅಧ್ಯಕ್ಷ ಡಿ.ಎಫ್.ಜುಟ್ಲರ, ಪರಿಸರವಾದಿ ಎಸ್.ಎಚ್.ವಾಸನ, ಸಾಹಿತಿ ರವಿ ಕಂಗಳ, ಕಮತಗಿಯ ಶಿವಕುಮಾರ ಸ್ವಾಮೀಜಿ, ಸಂಚಾಲಕರಾದ ಚನ್ನಬಸಪ್ಪ ಎಸ್.ಲೆಕ್ಕಿಹಾಳ, ರಮೇಶ ಕೊಕಾಟಿ, ಶ್ರೀನಿವಾಸ ಮಾರಾ, ಮುತ್ತು ಬಳ್ಳಾ ಹಾಜರಿದ್ದರು.