ಜ.6 ಭಾರತದಿಂದ ಬ್ರಿಟನ್ ಗೆ ವಿಮಾನ

ನವದೆಹಲಿ, ಜ.2- ಭಾರತ ಮತ್ತು ಇಂಗ್ಲೆಂಡ್ ನಡುವೆ ವಿಮಾನ ಸಂಚಾರಕ್ಕೆ ಅನುವು ಮಾಡಿಕೊಟ್ಟ ನಡುವೆ ಇದೀಗ ಭಾರತದಿಂದ ಜನವರಿ 6ರಂದು ಇಂಗ್ಲೆಂಡಿಗೆ ವಿಮಾನ ಪ್ರಯಾಣ ಆರಂಭಿಸಲಿದೆ.

ಜನವರಿ 8ರಿಂದ ಇಂಗ್ಲೆಂಡಿನಿಂದ ಭಾರತಕ್ಕೆ ವಿಮಾನ ಬರಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಜ. 8 ಜನವರಿ 23ರ ತನಕ ಎರಡು ದೇಶಗಳ ನಡುವೆ ವಿಮಾನ ಸಂಚಾರ ನಡೆಯಲಿದ್ದು ವಾರಕ್ಕೆ 15 ವಿಮಾನಗಳಂತೆ 30 ವಿಮಾನಗಳ ಸಂಚಾರ ನಡೆಯಲಿದೆ.

ಇಂಗ್ಲೆಂಡ್ ನಲ್ಲಿ ರೂಪಾಂತರ ಕರೋನಾ ಸ್ವಲ್ಪ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಡಿಸೆಂಬರ್ 21 ರಿಂದ ಡಿಸೆಂಬರ್ 31ರ ತನಕ ಇಂಗ್ಲೆಂಡ್ ನಿಂದ ಬರುವ ಎಲ್ಲಾ ವಿಮಾನಗಳ ಸಂಚಾರವನ್ನು ಭಾರತ ಸರ್ಕಾರ ರದ್ದುಮಾಡಿತು. ಜನವರಿ ,7 ತನಕ ವಿಸ್ತರಿಲಾಗಿತ್ತು.

ಈ ಸಂಬಂದ ಟ್ವೀಟ್ ಮಾಡಿರುವ ಪ್ರದೀಪ್ ಸಿಲಿಗುರಿ ಅವರು ಜನವರಿ 23 ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ