ಜ.6ರಂದು ನೂತನ ಅನುಭವ ಮಂಟಪಕ್ಕೆ ಅಡಿಗಲ್ಲು

ಬಸವಕಲ್ಯಾಣ,ಜ.3- ಶರಣರ ನಾಡು ಬಸವಕಲ್ಯಾಣದಲ್ಲಿ 12 ನೆಯ ಶತಮಾನದ ಶರಣರ ಕನಸು ನನಸಾಗಿಸಲು ನೂತನ ಅನುಭವ ಮಂಟಪಕ್ಕೆ ಇದೆ ಜನವರಿ 6 ರಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಅಡಿಗಲು ಹಾಕಲಿದ್ದಾರೆ ಎಂದು ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ ಇಂದಿಲ್ಲಿ ಹೇಳಿದರು.
ಈ ನೂತನ ಕಟ್ಟಡ 182 ಎತ್ತರ ವಾಗಿದ್ದು ಎಳು ಎಕ್ಕರೆ ಜಮೀನಿನಲ್ಲಿ ಸಿದ್ದ ಗೊಳ್ಳಲಿದೆ. ಎರಡು ವರ್ಷಗಳ ಕಾಲಾವಧಿಯಲ್ಲಿ ಇದನ್ನು ಪೂರ್ಣ ಗೊಳಿಸಲಾಗುತ್ತದೆ. ಈ ಕಾಮಗಸರಿಗೆ 100 ಕೋಟಿ ರೂಗಳ ಅನುದಾನ ಬಿಡಗಡೆಗೆ ಸರ್ಕಾರ ಅನುಮತಿ ಪಡೆಯಲಾಗುತ್ತಿದೆ.
ಅನುಭವ ಮಂಟಪಕ್ಕಾಗಿ ಒಟ್ಟು 72 ಎಕ್ಕರೆ ಜಮೀನು ಭೂಸ್ವಾಧಿನ ಪಡಿಸಿಕೊಳ್ಳಲಾಗುತ್ತಿದ್ದು, ಹಂತಹಂತವಾಗಿ ವಿವಿಧ ಕಟ್ಟಡಗಳ ಕಾಮಗಾರಿಗಳನ್ನು ಪ್ರಾರಂಭಿಸುವುದಾಗಿ ತಿಳಿಸಿದ ಸಚಿವ ಪ್ರಭು ಚವ್ಹಾಣ ಅವರು, ಅನುಭವಭವ ಮಂಟಪದ ಕಾರ್ಯಾಯೋಜನೆಯ ಮಾಹಿತಿಯನ್ನು ಮಾಧ್ಯಮಕ್ಕೆ ನೀಡಿದರು.
ಅನುಭವ ಮಂಟಪದ ಅಧ್ಯಕ್ಷ ಹಾಗೂ ಪೂಜ್ಯ ಡಾ, ಶ್ರೀಬಸವಲಿಂಗ ಪಟ್ಟದ್ದೆವರು, ಗುರುಬಸವ ಪಟ್ಟದೆವರು, ಬೀದರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಜಿಲ್ಲಾ ಅಧಿಕಾರಿ ರಾಮಚಂದ್ರನ್ ಆರ್, ಜಿಲ್ಲೆಯ ಪೆÇೀಲಿಸ್ ವರಿಷ್ಠ ಅಧಿಕಾರಿ ಡಿ.ಎಲ್ ನಾಗೇಶ, ಮತ್ತು ಸಹಾಯಕ ಆಯುಕ್ತರು, ತಹಶಿಲ್ದಾರರು ಲೋಕೋಪಯೋಗಿ ಅಧಿಕಾರ ಡಿ ವಾಯ್ ಎಸ್ ಪಿ, ಸಿಪಿಐ ಪಿಎಸ್‍ಐ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬಂದ್ದಿಗಳು ಮತ್ತು ಪಕ್ಷದ ಮುಖಂಡರು ಮಾಜಿ ಶಾಸಕರಾದ ಮಲ್ಲಿಕಾರ್ಜುನ ಖೂಬಾ, ಮುಖಂಡರಾದ ಶರಣು ಸಲಗರ, ಬಸವರಾಜ ಧನೂರೆ, ಅಶೋಕ ವಕಾರೆ ಕ್ರಿಷ್ಣ ಗೋಣೆ ,ರವಿ ಚಂದನಕೆರೆ, ಅರವಿಂದ ಮುತ್ತೆ, ಶಂಕರ್ ನಾಗ್ದೆ, ಸಂಘ ಸಂಸ್ಥೆ ಮುಖಂಡರು ಸೇರಿದಂತೆ ಅನೇಕರು ಇದ್ದರು.