ಜ.31 ರ ವರೆಗೆ ಅಂತರಾಷ್ಟ್ರೀಯ ವಿಮಾನ ಸಂಚಾರ ರದ್ದು

ನವದೆಹಲಿ, ಡಿ.30-ಇಂಗ್ಲೆಂಡ್ ನಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ವಿಮಾನ ಸಂಚಾರವನ್ನು ಕೇಂದ್ರ ಸರ್ಕಾರ‌ ಇದನ್ನು ಜನವರಿ 31 ವರೆಗೆ ವಿಸ್ತರಿಸಲಾಗಿದೆ.

ಜನವರಿ 7 ರವೆಗೆ ಇಂಗ್ಲೆಂಡ್ ನಿಂದ ಬರುವ ವಿಮಾನ ರದ್ದು ಮಾಡಿದ್ದ ಕೇಂದ್ರ ಸರ್ಕಾರ ಅದನ್ನು ಮಾರ್ಪಡಿಸಿ ಜನವರಿ 31 ರವರೆಗೆ ವಿಸ್ತರಿಸಲಾಗಿದೆ.

ರಾಷ್ಟ್ರೀಯ ಕಾರ್ಯಪಡೆ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆ ಮೇರೆಗೆ ಜನವರಿ 31ರ ತನಕ ಎಲ್ಲಾ ಅಂತರಾಷ್ಟ್ರೀಯ ವಿಮಾನ ಸಂಚಾರ ರದ್ದು ಮಾಡಿ ಕೇಂದ್ರ ನಾಗರಿಕ ವಿಮಾನ ಸಚಿವಾಲಯ ಆದೇಶ ಹೊರಡಿಸಿದೆ.

ಇಂಗ್ಲೆಂಡ್ನಿಂದ ಬಂದ ಪ್ರಯಾಣಿಕರಲ್ಲಿ ರೂಪಾಂತರ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಥದ್ದೊಂದು ನಿರ್ಧಾರವನ್ನು ಕೈಗೊಂಡಿದೆ.

25 ದೇಶಗಳು ವಿಮಾನ ಸಂಚಾರ ರದ್ದು:

ಇಂಗ್ಲೆಂಡ್ನಲ್ಲಿ ರೂಪಾಂತರ ಸ್ವಲ್ಪ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಗತ್ತಿನ 25ಕ್ಕೂ ಹೆಚ್ಚು ದೇಶಗಳು ಇಂಗ್ಲೆಂಡ್ನಿಂದ ಬರುವ ವಿಮಾನಗಳು ಮತ್ತು ಇಂಗ್ಲೆಂಡಿಗೆ ತೆರಳುವ ಎಲ್ಲ ವಿಮಾನಗಳನ್ನು ರದ್ದು ಮಾಡಿವೆ.

ಇದೀಗ ಕೇಂದ್ರ ಸರ್ಕಾರವು ಇಂಗ್ಲೆಂಡ್ ಗೆ ತೆರಳುವ ಮತ್ತು ಅಲ್ಲಿಂದ ಬರುವ ಎಲ್ಲ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಿ ಹೊಸ ಮಾರ್ಗಸೂಚಿ ಹೊರಡಿಸಿದೆ.